Spread the love

ಶಿವಮೊಗ್ಗ: ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮೊದಲನೇ ಕ್ರಾಸ್ ನಲ್ಲಿ ನಡೆದಿದೆ.

ಚೆನ್ನಗಿರಿ ತಾಲೂಕಿನ ಕಿರಣ್ (25) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ರಾಣೆಬೆನ್ನೂರು ಮೂಲದ ಸುನೀಲ್ (26) ಎಂಬುವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ಭದ್ರಾವತಿ ತಾಲೂಕು ಮಾಚೇನಹಳ್ಳಿ ಮೆಸ್ಕಾಂ ವಿಭಾಗ – 5 ರ ಲೈನ್ ಮ್ಯಾನ್ ಗಳಾಗಿದ್ದಾರೆ.

ಭಾನುವಾರ ಬೆಳಗ್ಗೆ ನಿರ್ವಹಣೆ ಸಂಬಂಧ ಲೈನ್ ಆಫ್ ಮಾಡಿ, ಅರ್ಥಿಂಗ್ ಮಾಡಿ ಕೆಲಸ ಮಾಡಲಾಗುತಿತ್ತು. 10.30ರ ವೇಳೆಗೆ ವಿದ್ಯುತ್ ಪ್ರವಹಿಸಿ ಕಿರಣ್ ಎಂಬುವರು ಕಂಬದಲ್ಲೆ ಮೃತಪಟ್ಟಿದ್ದಾರೆ. ಸುನಿಲ್ ಎಂಬುವರಿಗೆ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ.

ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕಂಡು ಲೈನ್ ಮ್ಯಾನ್ ಗಳು ಆಘಾತಕ್ಕೆ ಒಳಗಾಗಿದ್ದಾರೆ.

 

Leave a Reply

Your email address will not be published. Required fields are marked *