Spread the love

ಚೆನ್ನೈ: ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆ್ಯಂಟೋನಿ ಅವರ ಪುತ್ರಿ ಮೀರಾ ಮಂಗಳವಾರ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

12 ನೇ ತರಗತಿಯಲ್ಲಿ ಓದುತ್ತಿದ್ದ ಮೀರಾ ಮಂಗಳವಾರ ಮುಂಜಾನೆ ಚೆನ್ನೈನ ತೆನಾಂಪೇಟೆಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಮನೆ ಮಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಮೀರಾ ಕೊನೆಯುಸಿರೆಳೆದಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಮೀರಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಅದಕ್ಕಾಗಿಯೇ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಹೇಳಾಗಿದೆ.

ವಿಜಯ್ ಆ್ಯಂಟೋನಿ ಜನಪ್ರಿಯ ಸಂಗಿತ ಸಂಯೋಜಕರಾಗಿದ್ದು, ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಸಂಗೀತ ಸಂಯೋಜಕರಾಗಿದ್ದ ಅವರು ನಿರ್ಮಾಪಕ, ನಟ, ಗೀತರಚನೆಕಾರ, ಆಡಿಯೊ ಎಂಜಿನಿಯರ್ ಮತ್ತು ನಿರ್ದೇಶಕರೂ ಆಗಿ ಖ್ಯಾತಿ ಗಳಿಸಿದ್ದಾರೆ.

 

Leave a Reply

Your email address will not be published. Required fields are marked *