Spread the love

ಚೆನ್ನೈ: ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ.ಮಾರಿಮುತ್ತು (57) ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ವಾಹಿನಿಯೊಂದರ ಧಾರಾವಾಹಿಯ ಡಬ್ಬಿಂಗ್‌ನಲ್ಲಿ ತೊಡಗಿದ್ದ ವೇಳೆ ಕುಸಿದು ಬಿದ್ದಿದ್ದರು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.

56 ವರ್ಷದ ಮಾರಿಮುತ್ತು ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಜೈಲರ್ ಚಿತ್ರ ಮಾರಿಮುತ್ತುಗೆ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು. ಮಾರಿಮುತ್ತು ಜೈಲರ್ ಚಿತ್ರದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದರು.

ಮಾರಿಮುತ್ತು ಅವರು ಸಿನಿಮಾ ನಿರ್ದೇಶನ, ಟಿವಿ ಧಾರಾವಾಹಿಗಳಲ್ಲಿ ನಟನೆ ಹೊರತುಪಡಿಸಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ, ನಟರಾಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ದೇಶಕರಾಗುವ ಕನಸು ಹೊತ್ತ ಅವರು ತಮ್ಮ ಸ್ವಗ್ರಾಮ ಪಸುಮಲೈಥೇರಿನಿಂದ ಚೆನ್ನೈಗೆ 1990ರಲ್ಲಿ ಬಂದಿದ್ದರು.

ಬಳಿಕ ಸಹಾಯಕ ನಿರ್ದೇಶಕರಾಗಿಯೇ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದರು. ಹೆಸರಾಂತ ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ, ವಸಂತ್, ಸೀಮಾನ್ ಮತ್ತು ಎಸ್ಜೆ ಸೂರ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸಿಲಂಬಸರನ್ ಅವರ ‘ಮನ್ಮಧನ್’ ಸಿನಿಮಾದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

2008ರಲ್ಲಿ ಪ್ರಸನ್ನ ಮತ್ತು ಉದಯತಾರಾ ಅಭಿನಯದ ‘ಕಣ್ಣುಂ ಕಣ್ಣುಂ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು. ಆದರೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ನಂತರದಲ್ಲಿ, ಮಲಯಾಳಂ ಚಿತ್ರ ‘ಚಪ್ಪಾ ಕುರಿಶು’ (2011) ನಿಂದ ಸ್ಫೂರ್ತಿ ಪಡೆದು ‘ಪುಲಿವಾಲ್’ (2014) ಸಿನಿಮಾ ಮಾಡಿದರು.

ಬಳಿಕ ಸಹಾಯಕ ನಿರ್ದೇಶಕರಾಗಿಯೇ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದರು. ಹೆಸರಾಂತ ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ, ವಸಂತ್, ಸೀಮಾನ್ ಮತ್ತು ಎಸ್ಜೆ ಸೂರ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸಿಲಂಬಸರನ್ ಅವರ ‘ಮನ್ಮಧನ್’ ಸಿನಿಮಾದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *