Spread the love

ಬೆಂಗಳೂರು : ಬಿಜೆಪಿಯಲ್ಲಿ ಲಿಂಗಾಯತರನ್ನ ತುಳಿದಿದ್ದೇ ಬಿ.ಎಲ್ ಸಂತೋಷ್. ಇದೇ ಸಂತೋಷ್ ಬಿ.ಎಸ್ ಯಡಿಯೂರಪ್ಪ ಸೋಮಣ್ಣರನ್ನ ತುಳಿಯಲಿಲ್ಲವೇ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ವೀರಶೈವ ಲಿಂಗಾಯತರು ಬಿಜೆಪಿ ನಂಬಿ ಹೋಗಿದ್ದರು. ಆದರೆ ರಾಜ್ಯದಲ್ಲಿ ಲಿಂಗಾಯತರಿಗೆ ಕಾಂಗ್ರೆಸ್ ಕೊಟ್ಟಷ್ಟು ಪ್ರಾತಿನಿಧ್ಯ ಯಾರು ಕೊಟ್ಟಿಲ್ಲ. ಗೌರವ, ಪ್ರಾತಿನಿಧ್ಯ ಎಲ್ಲವೂ ಕೊಟ್ಟಿದ್ದು ಕಾಂಗ್ರೆಸ್ ಎಂದರು.

ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಬಿಜೆಪಿ ಇಡೀ ಜನತಂತ್ರ ವ್ಯವಸ್ಥೆಯನ್ನು ಬಡುಮೇಲು ಮಾಡುತ್ತಿದೆ. ಬಿಜೆಪಿಗೆ ವರ್ತಮಾನ ಇಲ್ಲ, ಭವಿಷ್ಯವಿಲ್ಲ. ಬಿಜೆಪಿ ನಾಯಕರು ಯಾವಾಗಲೂ ಪೂರ್ವಾಗ್ರಹ ಪೀಡಿತರು. ಬಿಜೆಪಿ ಇಡೀ ದೇಶದ ಬಡವರ ವಿರೋಧಿ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *