Spread the love

ಚಿಕ್ಕಮಗಳೂರು: ನಗರದ ಎರಡು ಪ್ರತಿಷ್ಠಿತ ಹೋಟೆಲ್‌ನಲ್ಲಿ ಮಟನ್ ಬಿರಿಯಾನಿ ಜೊತೆ ಗೋಮಾಂಸ ವನ್ನು ಮಿಕ್ಸ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಲತೀಫ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳು, ಚಿಕ್ಕಮಗಳೂರು ನಗರದ ಎವರೆಸ್ಟ್ ಹಾಗೂ ಬೆಂ ಗಳೂರು ಹೋಟೆಲ್‌ಗಳಲ್ಲಿ ಮಟನ್ ಬಿರಿಯಾನಿ ಜೊತೆ ಗೋಮಾಂಸವನ್ನು ಮಿಕ್ಸ್ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ಪರಿಶೀಲಿಸಿದಾಗ ಮಟನ್ ಬಿರಿಯಾನಿಯೊಂದಿಗೆ ಗೋಮಾಂಸ ಬೆರೆಸಿರುವುದು ಬೆಳಕಿಗೆ ಬಂದಿದೆ.

ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೋಟೆಲ್ ಗೆ ಬೀಗ ಜಡಿದಿದ್ದಾರೆ. ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾರಾಂತ್ಯ ಮತ್ತು ಪ್ರತಿನಿತ್ಯ ಆಗಮಿಸುತ್ತಿದ್ದು, ಲಾಭಗಳಿಸುವ ನಿಟ್ಟಿನಲ್ಲಿ ಮಟನ್ ಬಿರಿಯಾನಿಯೊಂದಿಗೆ ಗೋಮಾಂಸ ಬೆರೆಸಿದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

Leave a Reply

Your email address will not be published. Required fields are marked *