Spread the love

ದೊಡ್ಡಬಳ್ಳಾಪುರ : ವರಮಹಾಲಕ್ಷ್ಮಿ ಹಬ್ಬಕ್ಕೆಂದು ತಾವರೆ ಹೂ ಕೀಳಲು ಹೋಗಿದ್ದ ತಂದೆ ಮಗ ದುರಂತವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳಾದ ಪುಟ್ಟರಾಜು(42), ಮಗ ಕೇಶವ(14) ಮೃತಪಟ್ಟವರು.

ವರಮಹಾಲಕ್ಷ್ಮಿ ಹಬ್ವಕ್ಕೆಂದು ತಾವರೆ ಹೂ ತಂದು ಮಾರಾಟ ಮಾಡಲು ತಂದೆ ಮಗ ಪ್ಲಾನ್ ಮಾಡಿದ್ದರು. ಹೀಗಾಗಿ ಹೂ ತರಲು ಭೂಚನಹಳ್ಳಿ ಕೆರೆಗೆ ಇಳಿದಿದ್ದಾರೆ. ಮೊದಲು ಹೂ ಕೀಳಲು ಪುತ್ರ ಕೇಶವ ಕೆರೆಗೆ ಇಳಿದಿದ್ದಾನೆ. ಆದರೆ, ಏಕಾಏಕಿ ಕೇಶವ್ ನೀರಿನಲ್ಲಿ ಮುಳುಗಿದ್ದು, ಕೂಡಲೇ ತಂದೆ ಪುಟ್ಟರಾಜು ಸಹ ಪುತ್ರನನ್ನು ರಕ್ಷಿಸಲು ನೀರಿಗಿಳಿದಿದ್ದಾರೆ.ಆದರೆ, ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *