ಬಾಗಲಕೋಟೆ: ಕಾಲೇಜು ಆವರಣದಲ್ಲೇ ಪ್ರಾಂಶುಪಾಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಸಮೀಪದ ಹುನಗುಂದ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಮೃತ ಪ್ರಾಂಶುಪಾಲರನ್ನು 50 ವರ್ಷದ ನಾಗರಾಜ್ ಮುದಗಲ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಾನಪದ ಸಂಸ್ಕೃತಿ ಕಾರ್ಯಕ್ರಮದ ಸಿದ್ಧತೆಗಳನ್ನು ಪ್ರಾಂಶುಪಾಲರು ನೋಡಿಕೊಳ್ಳುತ್ತಿದ್ದರು. ತಡರಾತ್ರಿಯವರೆಗೂ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದ ನಂತರ ಮುದ್ಗಲ್ ಅವರು ಮನೆಗೆ ತೆರಳಿದರು. ಇಂದು ಬೆಳಿಗ್ಗೆ ರೆಡಿಯಾಗಿ ಕಾಲೇಜಿಗೆ ಬಂದಿದ್ದರು.
ಕಾಲೇಜಿಗೆ ಬಂದಿದ್ದ ನಂತರ ಮುದ್ಗಲ್ ಅವರು ಮೆಟ್ಟಿಲಿನ ಗ್ರಿಲ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರ ಕುಟುಂಬದವರ ಪ್ರಕಾರ, ಮುದ್ಗಲ್ ಅವರು ಕಾಲೇಜಿನಲ್ಲಿನ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದರೂ ಆದರೆ ಎಂದಿಗೂ ಆ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.