ತೀರ್ಥಹಳ್ಳಿ: ತೀರ್ಥಹಳ್ಳಿಯ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪಿ ಐ ಅಶ್ವಥ್ ಗೌಡ, ಸಿಪಿಐ ಪ್ರವೀಣ್ ನೀಲಮ್ಮನವರ್ ವರ್ಗಾವಣೆ ಮಾಡಲಾಗಿದೆ.
ಠಾಣೆ ಪಿಐ ಆಗಿದ್ದ ಅಶ್ವಥ್ ಗೌಡ ಅವರನ್ನು ಬೆಂಗಳೂರಿನ ಜ್ಞಾನ ಭಾರತಿ ಠಾಣೆ, ಮಾಳೂರು ಸಿಪಿಐ ಆಗಿದ್ದ ಪ್ರವೀಣ್ ನೀಲಮ್ಮನವರ ಅವರನ್ನು ಹುಬ್ಬಳಿಯ ಗೋಕುಲ್ ರಸ್ತೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಆಗುಂಬೆ ಹಾಗೂ ಮಾಳೂರು ಠಾಣೆ ಸಬ್ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಲಾಗಿತ್ತು. ಇದೀಗ ಇಬ್ಬರು ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.