ಚಿತ್ರದುರ್ಗ : ಮೊಹರಂ ಹಬ್ಬದ ಆಚರಣೆ ವೇಳೆ ಕೊಂಡ ಹಾಯುವಾಗ ಮಗು ಜೊತೆ ಕಾಲು ಜಾರಿ ವ್ಯಕ್ತಿ ಬಿದ್ದ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಕೊಂಡ ಹಾಯಲಾಗುತ್ತಿತ್ತು. ಈ ವೇಳೆ ರಮೇಶ್ ಎಂಬ ವ್ಯಕ್ತಿ ಮಗುವನ್ನು ಎತ್ತಿಕೊಂಡು ಅಗ್ನಿ ಕೊಂಡ ಹಾಯಲು ಯತ್ನಿಸಿದ್ದಾರೆ. ಆಗ ಕಾಲು ಜಾರಿ ಬಿದ್ದಿದ್ದು ರಮೇಶ್ ಹಾಗೂ ಮಗುವಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಕೆಂಡದಲ್ಲಿ ಬಿದ್ದ ಪುಟ್ಟ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.