Spread the love

ಶಿವಮೊಗ್ಗ: ಆಸ್ತಿ ವಿಚಾರದಲ್ಲಿ ನಡೆದ ತಳ್ಳಾಟ, ನೂಕಾಟದಲ್ಲಿ ವ್ಯಕ್ತಿಯೊಬ್ಬ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.

ವಿದ್ಯಾನಗರದ ಐದನೇ ತಿರುವಿನಲ್ಲಿ ಬರುವ ಸುಭಾಷ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಜ್ಞಾನೇಶ್ವರ್ ಎಂಬ 43 ವರ್ಷದ ವ್ಯಕ್ತಿ ಸಾವನ್ನಪ್ಪಿದ್ಧಾನೆ.

ಜ್ಞಾನೇಶ್ವರ್ ಬ್ಯಾಗ್ ರಿಪೇರಿ ಕೆಲಸ ಮಾಡುತ್ತಿದ್ದು, ಶನಿವಾರ ರಾತ್ರಿ ಅತ್ತೆ ಮನೆಗೆ ತೆರಳಿದ್ದ. ಆ ಮನೆ ತನಗೆ ಸೇರಬೇಕು ಎಂದು ಆತನ ಹೆಂಡತಿಯ ತಾಯಿಯ ತಮ್ಮನ ಜೊತೆಗೆ ಮಾತುಕತೆ ಆರಂಭಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆದು ತಳ್ಳಾಟ ಆಗಿದೆ. ಈ ವೇಳೆ ಜ್ಞಾನೇಶ್ವರ್ ಮನೆ ಎದುರಿಗಿದ್ದ ಚರಂಡಿಗೆ ಬಿದ್ದಿದ್ದಾನೆ. ಅಲ್ಲಿಯೇ ಸಾವನ್ನಪ್ಪಿದ್ಧಾನೆ. ಕುಡಿದ ಅಮಲಿನಲ್ಲಿ ನಡೆದ ಘಟನೆಯಲ್ಲಿ ಜ್ಞಾನೇಶ್ವರ್ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ ಸ್ಥಳೀಯರು ಚರಂಡಿಯಲ್ಲಿ ಮೃತದೇಹ ಇರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *