ಶಿವಮೊಗ್ಗ : ಮೈದುಂಬಿಕೊಂಡು ಹರಿ ಯುತ್ತಿರುವ ತುಂಗೆಗೆ ವ್ಯಕ್ತಿಯೋರ್ವ ಹಾರುವ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಘಟನೆ ಮಂಗಳವಾರ ನಡೆಯಿತಾದರೂ ನಂತರ ಪರಿಶೀಲಿಸಿದಾಗ ಈತ ಟೈಮ್ ಪಾಸ್ ಗೆ ಈ ರೀತಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ತುಂಗಾ ನದಿಯ ಒಡಲಿನಲ್ಲಿ ಒಳಹರಿವು ಕಳೆದೆರಡು ದಿನಗಳಿಂದ ಅಪಾಯ ಮಟ್ಟಕ್ಕೆ ತಲುಪುತ್ತಿವೆ. ೬೦ ಸಾವಿರ ಕ್ಯೂಸೆಕ್ ನೀರು ತುಂಗೆ ಹರಿದು ಬರುವ ವೇಳೆ ನದಿಗೆ ಹಾರಿದ್ದನ್ನು ಕಂಡು ಕೋಟೆ ಪೊಲೀಸರಿಗೆ ಮತ್ತು ಅಗ್ನಿಶಾಮಕದಳಕ್ಕೆ ಜನರು ಕರೆ ಮಾಡಿದ್ದರು. ಈ ವೇಳೆ ಹಳೆ ಸೇತುವೆ ಬಳಿ ವ್ಯಕ್ತಿಯೋರ್ವ ನದಿಗೆ ಹಾರಿ ರಾಜೀವ್ ಗಾಂಧಿ ಬಡಾವಣೆಯ ಬಳಿ ಎದ್ದು ಬರುತ್ತಿರುವ ದೃಶ್ಯ ಬಂತು.
ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ದೌಡಾ ಯಿಸಿದ್ದರು. ನಂತರ ಪೊಲೀಸರು ಆತನನ್ನು ವಿಚಾರಿಸಿದಾಗ ಗಂಗಪ್ಪ ಯಾನೆ ಅಂಗೂರಿ ಎಂದು ಹೆಸರು ಹೇಳಿದ್ದಾನೆ. ಈಜುವುದರಲ್ಲಿ ತಾನು ನುರಿತವನಾಗಿದ್ದರಿಂದ ಹಾರಿದ್ದಾಗಿ ಹೇಳಿಕೊಂಡಿದ್ದಾನೆ.