Spread the love

ಬೆಂಗಳೂರು : ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರೀಕ್ ಜೊತೆ ನನಗೆ ಸಂಬಂಧವಿದೆ ಎಂದು ಖಾಸಗಿ ಸುದ್ದಿವಾವಾಹಿನಿ ಯಲ್ಲಿ ಸುಳ್ಳು ಸುದ್ದಿ ಬಿತ್ತವಾಗಿರುವುದಕ್ಕೆ ಕೆಂಡಮಂಡಲರಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ಈ ಬಗ್ಗೆ ಸಾರ್ವಜನಿಕ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದ್ದಿ ಬಿತ್ತರವಾಗುವ ಮೊದಲು ಕ್ರಾಸ್‍ಚೆಕ್ ಮಾಡಬೇಕಿತ್ತು. ಇದಾವುನ್ನೂ ಮಾಡದೆ ಟಿವಿಯ ಆ್ಯಂಕರ್ ಏಕಾಏಕಿ ಆರೋಪಿಸಿದ್ದಾರೆ. ಹಾಗಾಗಿ ಆ್ಯಂಕರ್ ವಿರುದ್ಧ ಮಾನನಷ್ಠ ಮೊಕದ್ದಮೆ ದಾಖಲಿಸುತ್ತಿದ್ದೇನೆ ಎಂದು ಗುಡುಗಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ನನಗೆ ತೇಜೋವಧೆ ಮಾಡಿದರೆ ಸಹಿಸಲಾಗುವುದಿಲ್ಲ. ಟಿವಿ ಸ್ಟೇಷನ್‍ನವರು ಬೇಕಿದ್ದರೆ ಚರ್ಚೆಗೆ ಕರೆಯಲಿ ಎಂದು ಸವಾಲು ಹಾಕಿದರು.

ನಾನು ಈವರೆಗೆ ಯಾರ ಬಳಿ ಹೆಸರು ಕೆಡಿಸಿಕೊಂಡಿಲ್ಲ. ನಮ್ಮಂಥವರ ಬಗ್ಗೆ ಮಾತನಾಡ ಬೇಕೆಂದರೆ ತಲೆ ನೆಟ್ಟಗೆ ಇಟ್ಟುಕೊಂಡು ಮಾತನಾಡ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರೀಕ್ ಮತ್ತು ಕಿಮ್ಮನೆ ಸಂಪರ್ಕದ ಬಗ್ಗೆ ಏನು ಗೊತ್ತಿದೆ. ಚಾನೆಲ್ ಬಿಜೆಪಿ ಸಿದ್ಧಾಂತವನ್ನೇ ಮಾತನಾಡುವ ಟಿವಿ ಮಾಧ್ಯಮವಾಗಿದೆ. ಮೋಹನ್ ಭಾಗವತ್ ಹೆಗ್ಗಡೆವಾರ್ ಬಗ್ಗೆ ಮಾತ್ರ ಓದಿಕೊಂಡಿದ್ದಾರೆ. ನಾನು ಎಲ್ಲವನ್ನೂ ಓದಿದವನು. ಮಣಿಪುರದಲ್ಲಿ ಹಿಂದೂ ವರ್ಸಸ್ ಹಿಂದೂ ನಡೆಯುತ್ತಿದೆ.

ಇದು ಅಲ್ಪಸಂಖ್ಯಾತರ ಬಗ್ಗೆ ಸಂಪರ್ಕವಿದ್ದರೆ ದೇಶಕ್ಕೆ ಬೆಂಕಿ ಹಚ್ಚಲಾಗುತ್ತಿದೆ. 2015ರಲ್ಲಿ ಶಾರೀಕ್ ತಂದೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿದ್ದೇವೆ. ನನ್ನ ಅಣ್ಣನ ಮಗನ ಜೊತೆ ರಿಜಿಸ್ಟರ್ಡ್ ದಾಖಲೆ ಇದೆ. ಶಾರೀಕ್ ಅಪ್ಪನ ಜೊತೆ ವ್ಯವಹಾರ ಮಾಡಿ ಬಾಡಿಗೆ ಪಡೆದಿರುವೆ. ಅವರ ಅಪ್ಪ ಇಲ್ಲ. ಕಟ್ಟಡದ ಬಾಡಿಗೆ ಅಕ್ಟೋಬರ್ 2024ರವರೆಗೆ ಅಗ್ರಿಮೆಂಟ್ ಇದೆ. ಈಗ ಆ ಕಟ್ಟಡದಲ್ಲಿ ನಾವು ಬಾಡಿಗೆಯಲ್ಲಿ ಇಲ್ಲ. ಆದರೂ ನಮ್ಮ ವಿರುದ್ಧ ಸುದ್ದಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿ ಬಿತ್ತರಿಸಿದ ವಾಹಿನಿ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *