ಬೆಂಗಳೂರು : ಸಸ್ಯ ಕಾಶಿ ಲಾಲ್ ಬಾಗ್ ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಆ.4 ರಿಂದ ಆ.16 ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಲಾಲ್ ಬಾಗ್ ನಿರ್ದೇಶಕ ರಮೇಶ್, ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕಲಾಕೃತಿ ಬಗೆಬಗೆಯ ಹೂವಿನಲ್ಲಿ ಮೂಡಿಬರಲಿದೆ ಎಂದು ತಿಳಿಸಿದರು.
ನಿರ್ದೇಶಕರ ಕಚೇರಿಯಲ್ಲಿ ಸಭೆಯಲ್ಲಿ ಹಲವು ವಿಷಯ ಚರ್ಚಿಸಲಾಯಿತು, ಪ್ರತಿ ವರ್ಷದಂತೆ ಈ ಬಾರಿಯು ವಿಶೇಷವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದೇವೆ ಸುಮಾರು 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ ಮತ್ತು ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಇತರ ರಾಜ್ಯಗಳಿಂದ ಹೂಗಳು ಬರುತ್ತಿದ್ದೆ ಎಂದರು.
ಫ್ಲವರ್ ಶೋಗೆ ಈ ಬಾರಿ ಟಿಕೆಟ್ ದರ ಜಾಸ್ತಿ ಮಾಡಿಲ್ಲ. ಸಾಮಾನ್ಯ ದಿನಗಳಲ್ಲಿ ಹಿರಿಯರಿಗೆ 70 ರುಪಾಯಿ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಿದ್ದೇವೆ. ಭದ್ರತೆಗಾಗಿ 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಿದ್ದೇವೆ. ಲಾಲ್ ಬಾಗ್‍ನಲ್ಲಿರುವ ನಾಯಿಗಳಿಂದ ಜನರಿಗೆ ಸಮಸ್ಯೆಯಾಗಬಾರದದೆಂಬ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದ್ದೇವೆ. ಜೇನುಗಳನ್ನ ಹಿಡಿಸಿದ್ದೇವೆ. ಆಂಬುಲೆನ್ಸ್ ಹಾಗೂ ಮಹಿಳೆಯರಿಗೆಂದೇ ವಿಶೇಷ ಶಿಬಿರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.