Spread the love

ಬೆಂಗಳೂರು: ಟೊಮ್ಯಾಟೊ ರೇಟ್ ಗಗನಕ್ಕೇರಿದ್ದೇ ತಡ  ಟೊಮ್ಯಾಟೋ ಗಾಡಿಯನ್ನೇ ಅಪಹರಿಸಿ ಒಯ್ದ ಘಟನೆ ವರದಿಯಾಗಿದೆ. 250 ಕಿಲೋಗೂ ಹೆಚ್ಚು ಟೊಮ್ಯಾಟೊ ತುಂಬಿದ್ದ ಬೊಲೆರೋ ಪಿಕಪ್‌ ವಾಹನವನ್ನು ಪೀಣ್ಯ ಬಳಿ ದುಷ್ಕರ್ಮಿಗಳು ರೈತನ ಮೇಲೆ ಹಲ್ಲೆ ಮಾಡಿ ಕೊಂಡೊಯ್ದಿದ್ದಾರೆ.

ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೋ ಸಾಗಿಸುತ್ತಿದ್ದ ರೈತರ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹಿಂಬಾಲಿಸಿದ್ದರು. ಟೊಮ್ಯಾಟೊ ತುಂಬಿದ್ದ ಗಾಡಿ ನೋಡಿ ಅದನ್ನು ಫಾಲೋ ಮಾಡಿದ್ದರು. ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಗೆ ಬಂದಾಗ ಗಾಡಿ ಟಚ್ ಆದಂತೆ ನಾಟಕ ಆಡಿ ಬೊಲೆರೋ ನಿಲ್ಲಿಸಿ ಡ್ರೈವರ್‌ಗೆ ಹಲ್ಲೆ ಮಾಡಿದ್ದರು.

ಈ ವೇಳೆ ಹಣ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಇಲ್ಲ ಎಂದಾಗ ಮೊಬೈಲ್ ನಲ್ಲಿದ್ದ ಹಣ ಟ್ರಾನ್ಸಫರ್ ಮಾಡಿಸಿಕೊಂಡು ನಂತರ ಟೊಮ್ಯಾಟೋ ನೋಡಿ ಇಡೀ ಗಾಡಿಯೇ ಹೈಜಾಕ್ ಮಾಡಿದ್ದಾರೆ.  ಡ್ರೈವರ್ ಸಮೇತ ಬೊಲೆರೋ ವಾಹನ ಕಿಡ್ನ್ಯಾಪ್ ಮಾಡಿ ಬಳಿಕ ಚಿಕ್ಕಜಾಲ ಬಳಿ ಡ್ರೈವರ್ ನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ

ಸದ್ಯ ಘಟನೆ ಸಂಬಂಧ ಆರ್ ಎಮ್ ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ ಪೂಟೇಜ್ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

Leave a Reply

Your email address will not be published. Required fields are marked *