ಶಿವಮೊಗ್ಗ: ಇಲ್ಲಿನ ವಿಜಯ ನಗರ 2ನೇ ತಿರುವಿನಲ್ಲಿರುವ ಮನೆಯಯೊಂದರಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ನಗರವನ್ನೇ ಬೆಚ್ಚಿ ಬೀಳಿಸಿದೆ.
ಕಮಲಮ್ಮ (54) ಕೊಲೆಯಾದ ಮಹಿಳೆ. ಮನೆಯಲ್ಲಿ ಬೇರೆ ಯಾರೂ ಇರದ ಸಮಯದಲ್ಲಿ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕಮಲಮ್ಮ ಅವರು ಚಿಕ್ಕಮಗಳೂರಿನ ತರೀಕೆರೆ ಅಜ್ಜಂಪುರದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನ ಅವರ ಪತ್ನಿ. ಮಲ್ಲಿಕಾರ್ಜುನ ಅವರು ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದರು. ಶನಿವಾರ ಸಂಜೆ ಮನೆಯಲ್ಲಿ ಕಮಲಮ್ಮ ಒಬ್ಬರೇ ಇದ್ದಾಗ ಕೃತ್ಯ ಎಸೆಯಲಾಗಿದೆ.
ಮಲ್ಲಿಕಾರ್ಜುನ ಅವರು ಪತ್ನಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅಕ್ಕಪಕ್ಕದರಿಗೆ ಕರೆ ಮಾಡಿದ್ದಾರೆ. ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.ದಾವಣಗೆರೆಯಿಂದ ಆಗಮಿಸಿರುವ ಎಫ್ ಎಸ್ ಎಲ್ ತಜ್ಞರ ತಂಡ ಮತ್ತು ಶ್ವಾನದಳದಿಂದ ತಪಾಸಣೆ ನಡೆಸಿದೆ.ಮನೆಯ ಮುಂದಿನ ಬಾಗಿಲು ತೆರೆದ ಸ್ಟಿತಿಯಲ್ಲೇ ಕಂಡು ಬಂದಿದ್ದು, ದುಷ್ಕರ್ಮಿಗಳು ಮನೆಯ ಯಾವುದೇ ವಸ್ತುಗಳನ್ನು ಹೊತ್ತೊಯ್ಯಲಿಲ್ಲ.
ಪತಿ ಮಲ್ಲಿಕಾರ್ಜುನ ಅವರು ಗೋವಾದಿಂದ ಆಗಮಿಸಿದ್ದಾರೆ. ಪತಿ ಮತ್ತು ಮಗನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.