Spread the love

ಬೆಂಗಳೂರು : ಮಗಳೊಬ್ಬಳು ತನ್ನತಾಯಿಯನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ  ಮೈಕೋಲೇಔಟ್‌ ಪೊಲೀಸ್ ಠಾಣೆಗೆ ಮಗಳೊಬ್ಬಳು ತನ್ನ ತಾಯಿಯ ಶವವನ್ನ ಸೂಟ್ ಕೇಸ್ ನಲ್ಲಿ ತಂದಿದ್ದು ಅಲ್ಲಿದ್ದ ಪೊಲೀಸರು ಶಾಕ್ ಆದರು. ಪುತ್ರಿ ಸೋನಾಲಿ ಸೇನ್ ಎಂಬುವವಳೆ ಈ ಕೃತ್ಯವೆಸಗಿರುವುದು.  ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಫ್ಲಾಟ್ ನಲ್ಲಿ ಸೋನಾಲಿ ಸೇನ್, ಸೋನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು.

ನಿನ್ನೆ ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದು,  ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್ ತಾಯಿದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೂಟ್ ಕೇಸ್ ನಲ್ಲಿ ತಾಯಿಯ ಶವ ಹಾಕಿಕೊಂಡು ಮಧ್ಯಾಹ್ನ 1 ಗಂಟೆಗೆ ಊಬರ್ ಕ್ಯಾಬ್ ನಲ್ಲಿ  ಮೈಕೋಲೇಔಟ್‌ ಪೊಲೀಸ್ ಠಾಣೆಗೆ ಬಂದಿದ್ದಾಳೆ ಎನ್ನಲಾಗಿದೆ.

ಸೂಟ್ಕೇಸ್ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೆ ಆರೋಪಿ ಸೋನಾಲಿ ಸೇನ್ ಅವರನ್ನು ವಶಕ್ಕೆ ಪಡೆದರು. ಬಳಿಕ ಸೋನಾಲಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ.

ಸೋನಾಲಿ ಸೇನ್ ಹೇಳಿಕೆ: ತಾಯಿಯೇ ತನ್ನನ್ನು ಕೊಲ್ಲುವಂತೆ ಹೇಳಿದರು. ನಾನು ನಿನ್ನ ತಂದೆ ಬಳಿ ಹೊಗಬೇಕು ಎಂದು ಹೇಳಿದರಂತೆ. ಅದಕ್ಕೆ ಸೋನಾಲಿ ಸೇನ್ ನಿದ್ದೆ ಮಾತ್ರೆ ನೀಡಿದರಂತೆ. ಬಳಿಕ 11 ಗಂಟೆಗೆ ಪ್ಯಾರಲೀಸಿಸ್ ಆಗುತ್ತಿದೆ ಮಗಳೆ ಅಂದರಂತೆ. ಅಲ್ಲದೇ ನನ್ನನ್ನು ಕೊಂದು ಬಿಡು ಎಂದು ತಾಯಿಯೇ ಮಗಳಿಗೆ ಹೇಳಿದರಂತೆ. ಹೀಗಾಗಿ ಕೊಲೆ ಮಾಡಿದೆ ಎಂದು ಪೋಲಿಸರ ಮುಂದೆ ಬಾಯಿ ಬಿಟ್ಟಿದ್ದಾರೆ

ಇನ್ನು ಸೋನಾಲಿ ಪತಿ ಟೆಕ್ಕಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ನಡೆದ ಅವರು ಆಫೀಸ್ನಲ್ಲಿದ್ದು, ಪೊಲೀಸರು ಮಧ್ಯಾಹ್ನ ಅವರಿಗೆ ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದಾರೆ. ಪತ್ನಿ ಕೃತ್ಯ ಕಂಡು ಸೋನಾಲಿ ಪತಿ ಸಹ ಶಾಕ್ ಆಗಿದ್ದಾರೆ.

 

Leave a Reply

Your email address will not be published. Required fields are marked *