ನವದೆಹಲಿ : ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಜಿಎಸ್ ಟಿ ಪಾಲು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ : 4,314 ಕೋಟಿ ರೂ. ಹಂಚಿಕೆ ಮಾಡಿದೆ.
ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್ಟಿ ಪಾಲು ಹಂಚಿಕೆ ಮಾಡಿದೆ. ಒಟ್ಟು 1,18,280 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿದೆ. ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶಕ್ಕೆ ಕೇಂದ್ರದಿಂದ ಮುಂದಿನ ತಿಂಗಳ ಜಿಎಸ್ಟಿ ಪಾಲನ್ನು ಮುಂಗಡವಾಗಿ ಸೇರಿಸಿ ಕೊಡಲಾಗಿದೆ.
ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ. ಪೈಕಿ ಕರ್ನಾಟಕಕ್ಕೆ 4,314 ರೂ, ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ ನೀಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಇನ್ನು ಉತ್ತರಪ್ರದೇಶಕ್ಕೆ 21,218 ಕೋಟಿ ರೂ ಜಿಎಸ್ ಟಿ ಪಾಲು ಸಿಕ್ಕಿದೆ.