Spread the love

ಶಿವಮೊಗ್ಗ : ಗ್ಯಾರಂಟಿ ಜಾರಿ ಮಾಡಲು ರಾಜಕೀಯ ಪಕ್ಷಕ್ಕೆ ಸ್ವಲ್ಪ ಸಮಯ ಕೊಡಬೇಕು. ಸರ್ಕಾರದ ನಿರ್ಧಾರದ  ಮೇಲೆ ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಮೊದಲ ಸಂಫುಟದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ  ತರುವುದಾಗಿ ಹೇಳಿದ್ದರು. ಇನ್ನೂ ಗ್ಯಾರಂಟಿ ಜಾರಿಗೆ ಬಂದಿಲ್ಲ.  ಮೊದಲು ನನಗೂ ಫ್ರಿ ನಿನಗೂ ಫ‍್ರಿ ಅಂದರು. ಈಗ ಗ್ಯಾರಂಟಿಗಳಿಗೆ ಷರತ್ತು ಹಾಕಿದ್ದಾರೆ.  ಗ್ಯಾರಂಟಿ ಜಾರಿ ಮಾಡಲು ಸ್ವಲ್ಪ ಸಮಯ ಕೊಟ್ಟು ನೋಡಬೇಕು. ರಾಜಕೀಯ ಪಕ್ಷಕ್ಕೆ ನಾವು ಸ್ವಲ್ಪ ಸಮಯ ಕೊಡಬೇಕಾಗುತ್ತದೆ  ಸರ್ಕಾರದ ನಿರ್ಧಾರದ  ಮೇಲೆ ಬಿಜೆಪಿ ಮುಂದಿನ ತೀರ್ಮಾನ ಮಾಡಲಿದೆ ಎಂದರು.

ಇನ್ನು ಗ್ಯಾರಂಟಿ ಯೋಜನೆ ಜಾರಿಗೆ ಷರತ್ತು ವಿಧಿಸುತ್ತಿರುವುದಕ್ಕೆ ಜನ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.  ಮೊದಲು ಎಲ್ಲರಿಗೂ ಫ್ರಿ ಎಂದಿದ್ದರೂ ಈಗ ಷರತ್ತು ವಿಧಿಸುತ್ತಿರುವುದು ಸರಿಯಲ್ಲ  ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Leave a Reply

Your email address will not be published. Required fields are marked *