ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ನವೀನ್ ಕುಮಾರ್ ಆರ್ ರವರು ಗಣಿತಶಾಸ್ತ್ರದ “ಶಾಖ ಮತ್ತು ಸಮೂಹ ವರ್ಗಾವಣೆ , ದ್ರವಚನ ಶಾಸ್ತ್ರ ” ವಿಷಯಗಳಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಸಂದಿದೆ.
ಹಿರಿಯೂರು ತಾಲ್ಲೂಕಿನ ರಂಗಸ್ವಾಮಿ ಅವರ ಪುತ್ರರಾಗಿರುವ ನವೀನ್ ಕುಮಾರ್ ಆರ್ ರವರು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2021 ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 87 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಕಟಣೆಗಳು ಉಲ್ಲೇಖಗಳು-3264, ಹೆಚ್-ಇಂಡೆಕ್ಸ್-37, ಐ-ಟೆನ್ ಇಂಡೆಕ್ಸ್-63 ಗಳನ್ನು ಒಳಗೊಂಡಿರುತ್ತದೆ.
ವಿಶ್ವವಿದ್ಯಾಲಯ ದ ಗಣಿತಶಾಸ್ತ್ರ ವಿಭಾಗದ ಡಾ. ಬಿ.ಸಿ ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ನವೀನ್ ಕುಮಾರ್ ಪ್ರಬಂಧ ಮಂಡಿಸಿದ್ದರು.