Spread the love

 ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ “ಡಿ.ದೇವರಾಜ ಅರಸು ಬಡವರು, ಹಿಂದುಳಿದವರು, ದೀನ-ದಲಿತರ ಪಾಲಿನ ಸೂಯ೯” ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್. ರಾಚಪ್ಪ ಅಭಿಪ್ರಾಯಪಟ್ಟರು.

“ಅರಸು 41ನೆ ಪುಣ್ಯಸ್ಮರಣೆ” ಅಂಗವಾಗಿ ಹಿಂದುಳಿದ ಜನ ಜಾಗೃತಿ ವೇದಿಕೆ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏಪ೯ಡಿಸಿದ್ದ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ ಬಡ, ಶ್ರಮಿಕ, ನಿಲ೯ಕ್ಷಿತ ಸಮುದಾಯಗಳಿಗೆ ಸಾಮಾಜಿಕ-ರಾಜಕೀಯ ಶಕ್ತಿ ತುಂಬಿದ ಅರಸರ ಕೊಡುಗೆ ಅಪಾರವಾದುದು ಎಂದು ಗುಣಗಾನ ಮಾಡಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ. ಹೆಚ್. ನಾಗರಾಜ್ ಸಮಾನತೆ ಸಮಗ್ರತೆ ಸಹಿಷ್ಣುತೆ ತತ್ವಗಳಡಿಯಲ್ಲಿ ರಾಜ್ಯಭಾರ ಮಾಡಿದ ಅರಸು ದೇಶ ಕಂಡ ಬಹುಅಪರೂಪದ ರಾಜಕಾರಣಿಗಳಲ್ಲಿ ಅಗ್ರಗಣ್ಯರು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ದೇವರಾಜ ಅರಸರಿಗೆ ನಾವು  ಗೌರವ ಸಲ್ಲಿಸಬೇಕಾಗಿದೆಯೆಂದರು.

ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಜನಜಾಗೃತಿಯೇ ಇಲ್ಲದ ಅಂದಿನ ದಿನಮಾನಗಳಲ್ಲಿ “ಉಳುವವನೇ ಭೂಮಿಯ ಒಡೆಯ” ಕಾನೂನು ಜಾರಿಗೆ ತಂದ ದೇವರಾಜ ಅರಸು ರೀತಿಯ ಮುಖ್ಯಮಂತ್ರಿ ದೇಶದಲ್ಲೇ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ ಎಂದರು.

ಕಾಯ೯ಕ್ರಮದಲ್ಲಿ ಬಡ ಹಿಂದುಳಿದ ವಗ೯ಗಳ ಹಾಗು ಮಂಗಳಮುಖಿ ಸಂಘಟನೆ ಸಬಲೀಕಣಕ್ಕಾಗಿ ಸುಮಾರು ಎರಡೂವರೆ ದಶಕಗಳಿಂದ ದುಡಿಯುತ್ತಿರುವ ಸ್ಥಳೀಯ “ರಕ್ಷ ಸಮುದಾಯ ಸಂಘಟನೆ” ಅಧ್ಯಕ್ಷ ಮೊಹಮ್ಮದ್ ಸೈಫುಲ್ಲಾ-ಪ್ಯಾರುದಾ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಆರಂಭದಲ್ಲಿ ಜನ ಜಾಗೃತಿ ವೇದಿಕೆ ಸಂಚಾಲಕ ಆರ್. ಟಿ. ನಟರಾಜ್ ಅರಸು ಪುಣ್ಯಸ್ಮರಣೆ ಆಚರಣೆ ಪ್ರಸ್ತಾಪಿಸಿ ಸವ೯ರನ್ನು ಸ್ವಾಗತಿಸಿದರು, ಕಾಯ೯ದಶಿ೯ ಮನೋಹರ್ ಕುಮಾರ್ ಕೊನೆಯಲ್ಲಿ ವಂದನೆಗಳನ್ನು ಸಮಪಿ೯ಸಿದರು.

Leave a Reply

Your email address will not be published. Required fields are marked *