ಶಿವಮೊಗ್ಗ : ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾಡಗಿಯಲ್ಲಿ ಮುಂಜಾನೆ 13 ಮಂದಿಯನ್ನು ಟಿಟಿ ವಾಹನ ಬಲಿ ತೆಗೆದುಕೊಂಡಿತ್ತು.
ಟಿಟಿ ವಾಹನವನ್ನು 15 ದಿನಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ತಿಳಿದುಬಂದಿತ್ತು. ವಾಹನದ ಪೂಜೆಗಾಗಿ ಕುಟುಂಬ ತೆರಳಿದ್ದು, ಪೂಜೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು.
ಇದೀಗ ಮೃತಪಟ್ಟ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಹಣ ಸಹಾಯ ಮಾಡಿದ್ದಾರೆ ಶಿವರಾಜ್‌ಕುಮಾರ್-ಗೀತಾ ದಂಪತಿ .ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆದಿತ್ತು.
ಕೆಲ ದಿನಗಳ ಹಿಂದೆ ಎಮ್ಮೆಹಟ್ಟಿಗೆ ಭೇಟಿ ನೀಡಿ ಕುಟುಂಬಗಳಿಗೆ ಶಿವರಾಜ್‌ಕುಮಾರ್ ಹಾಗೂ ಗೀತಾ ಸಾಂತ್ವನ ಹೇಳಿದ್ದರು. ಇದೀಗ ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದಾರೆ ದೊಡ್ಮನೆ ಮಗ.
ಈ ವೇಳೆ ಭದ್ರಾವತಿಯ ಶಾಸಕ ಸಂಗಮೇಶ್ವರ್ ಶಿವರಾಜ್ ಕುಮಾರ್ ದಂಪತಿಗಳಿಗೆ ಸಾಥ್ ನೀಡಿದರು.