ದಾವಣಗೆರೆ: ಹರಿಹರದ ಬಳಿ ಇರುವ ರಾಜನಹಳ್ಳಿ ಜಾಕ್ ವೆಲ್ ಬಳಿ ಜಿಲ್ಲೆಯ ಜೀವನದಿ ತುಂಗಭದ್ರೆಯ ತಟದಲ್ಲಿ ಅಪರೂಪದ ನೀರು ನಾಯಿಗಳು ಕಾಣಿಸಿಕೊಂಡಿವೆ.
ದಾವಣಗೆರೆಯ ಹರಿಹರದ ಬಳಿ ಇರುವ ರಾಜನಹಳ್ಳಿ ಜಾಕ್ ವೆಲ್ ಬಳಿ ಕಾಣಿಸಿಕೊಂಡ ನೀರು ನಾಯಿಗಳ ಹಿಂಡು ಜನರು ಅಚ್ಚರಿಗೊಳಗಾಗಿದ್ದಾರೆ. ಸಾಮಾನ್ಯವಾಗಿ ಕಾಣಿಸದ ನೀರುನಾಯಿ ತುಂಗಭದ್ರಾ ನದಿ ದಂಡೆಯಲ್ಲಿ ಆಟವಾಡು ವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿ ಯುತ್ತಿರುವುದು ಕಂಡು ಬರುತ್ತಿದೆ.
ಕೇವಲ ಆಣೆಕಟ್ಟು ಭಾಗದಲ್ಲಿ ಕಾಣಿಸುವ ನೀರು ನಾಯಿಗಳು ನದಿಯ ತಟದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವು ದು ವಿಶೇಷ. ಅತಿ ಹೆಚ್ಚಿನ ಮಳೆಯಿಂದ ನದಿಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಆಟವಾಡುತ್ತಿರುವ ನೀರು ನಾಯಿಗಳ ಹಿಂಡು ಈಗ ಜನರನ್ನು ಆಕರ್ಷಿಸುತ್ತಿವೆ.