Spread the love

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾ ಜ್ವಾಲಾಳ ಎರಡು ಮರಿಗಳು ಸಾವನ್ನಪ್ಪಿವೆ.  ಜ್ವಾಲಾ ಮಾ.24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ನಾಲ್ಕು ಮರಿಗಳ ಪೈಕಿ ಇತ್ತೀಚೆಗೆ ಒಂದು ಮರಿ ಸಾವನ್ನಪ್ಪಿತ್ತು. ಇಂದು 2 ಮರಿಗಳು ಸಾವನ್ನಪ್ಪಿದ್ದು, ಮತ್ತೊಂದು ಚೀತಾ ಮರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಉದ್ಯಾನವನದ ಮೂಲಗಳು ತಿಳಿಸಿವೆ.

ಮೊದಲ ಮರಿ ಬಲಹೀನತೆಯಿಂದ ಸಾವನ್ನಪ್ಪಿತ್ತು,  ಇಂದು 2 ಚೀತಾ ಮರಿಗಳು ಸಾವನ್ನಪ್ಪುವ ಮೂಲಕ 2 ತಿಂಗಳಲ್ಲಿ 6 ಚೀತಾಗಳು ಸಾವನ್ನಪ್ಪಿವೆ. ಈ ಪೈಕಿ  ಇಲ್ಲೇ ಹುಟ್ಟಿದ ಚೀತಾಗಳಷ್ಟೇ ಅಲ್ಲದೇ ಆಫ್ರಿಕಾದಿಂದ ತಂದಿದ್ದ ಮೂರು ಚೀತಾಗಳೂ ಇವೆ.

Leave a Reply

Your email address will not be published. Required fields are marked *