Trending

NEET-PG ಪರೀಕ್ಷೆಯ ಹೊಸ ದಿನಾಂಕ ಪ್ರಕಟ, ಆಗಸ್ಟ್ 11 ರಂದು ಎರಡು ಪಾಳಿಗಳಲ್ಲಿ ಎಕ್ಸಾಂ

Spread the love

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ(ಎನ್‌ಬಿಇಎಂಎಸ್) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, ಸ್ನಾತಕೋತ್ತರ(ನೀಟ್-ಪಿಜಿ) ಪರೀಕ್ಷೆಯ ಹೊಸ ದಿನಾಂಕವನ್ನು ಶುಕ್ರವಾರ ಪ್ರಕಟಿಸಿದ್ದು, ಆಗಸ್ಟ್ 11 ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 11 ರಂದು ಎರಡು ಶಿಫ್ಟ್ ಗಳಲ್ಲಿ ನಡೆಸಲಾಗುವುದು ಎಂದು ಎನ್‌ಬಿಇಎಂಎಸ್ ಹೇಳಿದೆ.

ಮೇ 5ರಂದು ನಡೆದಿದ್ದ ನೀಟ್‌-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಬೆಳಕಿಗೆ ಬಂದಿತ್ತು. ಈ ವಿವಾದದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 23ರಂದು ನಡೆಯಬೇಕಿದ್ದ ನೀಟ್‌-ಪಿಜಿ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿತ್ತು.

ಇದೀಗ ನೀಟ್ ಪಿಜಿಗೆ ಹೊಸ ದಿನಾಂಕ ಘೋಷಿಸಿದ್ದು, ಆಗಸ್ಟ್ 11 ರಂದು ಎರಡು ಪಾಳಿಯಲ್ಲಿ ನಡೆಯಲಿದೆ.

ದೇಶಾದ್ಯಂತ ಸುಮಾರು 52,000 ಸ್ನಾತಕೋತ್ತರ ಸೀಟುಗಳಿಗೆ ಪ್ರತಿ ವರ್ಷ ಸುಮಾರು ಎರಡು ಲಕ್ಷ ಎಂಬಿಬಿಎಸ್ ಪದವೀಧರರು ನೀಟ್ ಪಿಜಿ ಪರೀಕ್ಷೆ ಬರೆಯುತ್ತಾರೆ.

 

 

[pj-news-ticker]