ಲಖನೌ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಸುಮಾರು 121 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ.
ಈ ವೇಳೆ ಹೆಣಗಳ ರಾಶಿ ನೋಡಿ ಆಘಾತಗೊಂಡ ಕರ್ತವ್ಯ ನಿರತ ಪೊಲೀಸ್ ಒಬ್ಬರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಮೃತ ಪೊಲೀಸ್‌ನನ್ನು ರಜನೀಶ್ ಎಂದು ಗುರುತಿಸಲಾಗಿದೆ.
ಹತ್ರಾಸ್‌ನ ಸಿಕಂದರ್‌ರಾವ್ ಪ್ರದೇಶದ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಾರಾಯಣ ಸಕಾರ್ ಹರಿ ಅಥವಾ ಸಕಾರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಅವರು ಸತ್ಸಂಗ ಆಯೋಜಿಸಿದ್ದರು. ಈ ವೇಳೆ ಭೀಕರ ಕಾಲ್ತುಳಿತ ಸಂಭವಿಸಿತು.
ಮೃತದೇಹಗಳನ್ನು ಇಟಾಹ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.