Breaking
Mon. Oct 14th, 2024

ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಈಶ್ವರಪ್ಪ

By Mooka Nayaka News Jul 1, 2024
Spread the love

ಶಿವಮೊಗ್ಗ: ಕಾಂಗ್ರೆಸ್ಸಿನ ನಾಯಕರು ಎಷ್ಟರ ಮಟ್ಟಿಗೆ ಜಾತಿವಾದಿಗಳು ಎಂದು ರಾಜ್ಯದ ಮುಂದೆ ಬೆತ್ತಲೆಯಾಗಿದೆ. ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ಆ ಸ್ಥಾನವನ್ನು ಸಹ ಕಾಂಗ್ರೆಸ್ ನವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರ ಸ್ಥಾನದಲ್ಲಿರುವ ಸ್ವಾಮೀಜಿಗಳಿಂದ ಇಂತವರಿಗೆ ಸಿಎಂ ಸ್ಥಾನ ಕೊಡಿಸಿ ಎಂದು ಹೇಳಿಸುತ್ತಿದ್ದಾರೆ. ಇಂತಹ ಹೇಳಿಕೆ ಕೊಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಮ್ಮ ಅಧಿಕಾರಕ್ಕೆ ಜಾತಿ ಮಧ್ಯ ತರುವುದನ್ನು ಖಂಡಿಸುತ್ತೇನೆ.  ಇದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಿರ್ಧರಿಸಿಕೊಳ್ಳಿ. ಇದರ ಬಹಿರಂಗ ಚರ್ಚೆ, ಹೇಳಿಕೆ ಬೇಡ. ಸ್ವಾಮೀಜಿಗಳನ್ನು ನಿಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದರು.

ಸಂವಿಧಾನದಲ್ಲಿ ಒಂದೇ ಸಿಎಂ ಗೆ ಅವಕಾಶ ಇರುವುದು. ಡಿಸಿಎಂ ನೀವು ಎಷ್ಟು ಬೇಕಾದರೂ ಮಾಡಿಕೊಳ್ಳಿ ಎಂದು ಈಶ್ವರಪ್ಪ ಹೇಳಿದರು.

Related Post