Spread the love

ಬೆಂಗಳೂರು: ನಗರದ ಕೆನಡಿಯನ್‌ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಭಾನುವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊ೦ಡು 12ನೇ ತರಗತಿ ಪೂರ್ಣಗೊಳಿಸಿದ ಮೊಮ್ಮಗ ಧವನ್‌ಗೆ  ತಾವೇ ಪ್ರಮಾಣಪತ್ರವನ್ನು ನೀಡಿದರು.

ಪದವಿ ಪಡೆದ 68 ವಿದ್ಯಾರ್ಥಿಗಳಲ್ಲಿ ಅವರ ಮೊಮ್ಮಗ ಧವನ್ ರಾಕೇಶ್ ಕೂಡ ಒಬ್ಬರು. ಈ ವೇಳೆ ಧವನ್ ಗೌನ್ ಮೇಲೆ ಕನ್ನಡ ಧ್ವಜವನ್ನು ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಈ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ ಅವರು “ನನ್ನ ಮೊಮ್ಮಗ ಕೆನಿಡಿಯನ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ 12 ನೇ ತರಗತಿ ಪೂರ್ಣಗೊಳಿಸಿದ್ದಾನೆ. ಪದವಿ ತರಗತಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗಾಗಿ ಶಾಲೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು. ಈ ಸಮಾರಂಭದ ಭಾಗವಾಗಲು ನನಗೆ ಸಂತೋಷವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಧವನ್ ಅವರು ದಿ. ರಾಕೇಶ್ ಅವರ ಪುತ್ರ, ಅವರು ಸಿದ್ದರಾಮಯ್ಯ ಅವರ ರಾಜಕೀಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ. ಧವನ್ ಈಚೆಗೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ತಾತ ಸಿದ್ದರಾಮಯ್ಯ ಅವರ ಪರವಾಗಿ ವರುಣಾದಲ್ಲಿ ಪ್ರಚಾರ ಮಾಡಿದ್ದರು.

ಮೊಮ್ಮಗ ರಾಜಕೀಯದಲ್ಲಿ ಆಸಕ್ತಿ ತೋರುತ್ತಿದ್ದಾನೆ, ಆದರೆ ಅವನಿಗೆ ಇನ್ನು ಕೇವಲ 17 ವರ್ಷ. ಅವನು ಕಾನೂನು ವಿದ್ಯಾಭ್ಯಾಸ ಮಾಡಬೇಕಿದೆ ಹೀಗಾಗಿ ವಿದ್ಯಾಭಾಸದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದರು. ಇನ್ನು ಸಮಾರಂಭದಲ್ಲಿ ಲೇಖಕಿ ಹಾಗೂ ಪದ್ಮಭೂಷಣ ಪುರಸ್ಕೃತೆ ಸುಧಾಮೂರ್ತಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

 

Leave a Reply

Your email address will not be published. Required fields are marked *