Trending

ಹಾವೇರಿ ಬಳಿ ಭೀಕರ ರಸ್ತೆ ಅಪಘಾತ : ಭದ್ರಾವತಿ ಎಮ್ಮಿಹಟ್ಟಿ ಗ್ರಾಮದ 13 ಜನರು ಸಾವು

Spread the love

ಹಾವೇರಿ: ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ  ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ನಡೆದು ಇಬ್ಬರು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟ ದುರ್ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಪರಶುರಾಮ್ ( 45 ), ಭಾಗ್ಯ (40), ನಾಗೇಶ್ ( 50) ವಿಶಾಲಾಕ್ಷಿ( 50), ಸುಭದ್ರಾ ಭಾಯಿ( 65), ಪುಣ್ಯ( 50), ಮಂಜುಳಾ ಭಾಯಿ( 57), ಆದರ್ಶ್( 23) ಡ್ರೈವರ್, ಮಾನಸಾ( 24), ರೂಪಾ( 40), ಮಂಜುಳಾ( 50), (4 ವರ್ಷ ಹಾಗೂ 6 ವರ್ಷದ ಮಕ್ಕಳು( ಹೆಸರು ತಿಳಿದು ಬರಬೇಕಿದೆ) ಮೃತಪಟ್ಟಿದ್ದಾರೆ.

ಗಾಯಾಳುಗಳಾದ ಅರ್ಪಿತಾ(18) ಸೇರಿದಂತೆ ಇನ್ನೂ ಮೂವರು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಭದ್ರಾವತಿಗೆ ಮರಳಿ ಹೋಗುತ್ತಿರುವಾಗ ತಡರಾತ್ರಿ 3.30ಗಂಟೆಗೆ ಈ ಭೀಕರ ಆಪಘಾತ ಸಂಭವಿಸಿದೆ.

ಅಪಘಾತದಲ್ಲಿ ಟಿಟಿ ವಾಹನ ನುಜ್ಜು ಗುಜ್ಜಾಗಿದ್ದು, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತಗೆದು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಟಿಟಿ ವಾಹನದಲ್ಲಿ 17 ಜನರು ಪ್ರಯಾಣಿಸುತ್ತಿದ್ದರು. ಇದರಲ್ಲಿ 13 ಜನರು ಮೃತಪಟ್ಟಿದ್ದು, ನಾಲ್ವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ ಪಿ ಅಂಶುಕುಮಾರ ತಿಳಿಸಿದ್ದಾರೆ.

[pj-news-ticker]