Spread the love

ಬೆಂಗಳೂರು:  ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ನ ಮುಖವಾಡ  ಬಯಲಾಗಿದೆ ಎಂದು ಶಿಕಾರಿಪುರದ ಶಾಸಕ  ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ,  ಅಧಿಕಾರದ ಲಾಭಕ್ಕಾಗಿ ಲಿಂಗಾಯತ ಹೆಸರನ್ನು ಬಳಸಿಕೊಂಡ ಕಾಂಗ್ರೆಸ್ನ ನಾಯಕರು ಲಿಂಗಾಯತರಿಗೆ ಸಿಎಂ ಅಥವಾ ಡಿಸಿಎಂ ನೀಡಿ ಎಂಬ ಮಾತು ಕೇಳಿಬಂದಾಗ ಮೌನವಾಗಿದ್ದಾರೆ. 39 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದರು ಸರಿಯಾದ ಸ್ಥಾನಕ್ಕಾಗಿ ಯಾವುದೇ ನಾಯಕ ತಮ್ಮ ಧ್ವನಿ ಎತ್ತದಿರುವುದು ವಿಪರ್ಯಾವಾಗಿದೆ. ಕಾಂಗ್ರೆಸ್ನ ನಿಜ ಮುಖ ಬಯಲಾಗಿದೆ. ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ನ್ಯಾಯ ಒದಿಗಿಸಿಲ್ಲ ಎಂದು ಟೀಕಿಸಿದ್ದಾರೆ.

ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವುದು ಬಿಜೆಪಿ ಮಾತ್ರ. ಬಸವಣ್ಣನವರ ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ. ಕಾಂಗ್ರೆಸ್‌ನ ಸುಳ್ಳಿನ ಭರವಸೆಗೆ ಬಿದ್ದಿರುವುದು ರಾಜ್ಯದ ಜನರು ಶೀಘ್ರದಲ್ಲಿಯೇ ಅರಿತುಕೊಳ್ಳಲಿದ್ದು ಭಾರತ ತಾಯಿಯಾಗಿ ಬಿಜೆಪಿ ಮತ್ತು ನರೇಂದ್ರ ಮದೋದಿ ಅವರೊಂದಿಗೆ ನಿಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *