ಅಯೋಧ್ಯಾ: ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆದು 6 ತಿಂಗಳೂ ಕಳೆದಿಲ್ಲ. ಅಷ್ಟರಲ್ಲೇ ಸಮಸ್ಯೆಗಳು ಪತ್ತೆ ಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.
ಮುಂಗಾರು ಮಳೆಯ ಪರಿಣಾಮ, ಶ್ರೀರಾಮನ ಗರ್ಭಗುಡಿ ಛಾವಣಿಯ ಲ್ಲೇ ನೀರು ಸೋರಿಕೆಯಾಗಿದೆ. ಬಾಲರಾಮನ ವಿಗ್ರಹದ ಸುತ್ತಮುತ್ತ ನೀರು ನಿಲ್ಲುತ್ತಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ದೇಗುಲ ದಲ್ಲಿ ನೀರು ಹರಿದುಹೋಗಲು ಸರಿ ಯಾದ ಚರಂಡಿ ವ್ಯವಸ್ಥೆಗಳಿಲ್ಲ ಎಂದು ದೂರಿದ್ದಾರೆ.
ನೀರು ಸೋರಿಕೆಯಾಗುತ್ತಿಲ್ಲ ಎಂದ ಸಮಿತಿ: ಈ ಆರೋಪದ ಕುರಿತಂತೆ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಪ್ರತಿಕ್ರಿಯಿ ಸಿದ್ದು, ವಿಷಯ ತಿಳಿದ ಕೂಡಲೇ ಖುದ್ದು ದೇಗುಲಕ್ಕೆ ಬಂದು ಪರಿಶೀಲಿಸಿದ್ದೇನೆ. ಛಾವಣಿಯಲ್ಲಿ ಯಾವುದೇ ಸೋರಿಕೆ ಯಾಗಿಲ್ಲ. ಆದರೆ ವಿದ್ಯುತ್ ತಂತಿ ಗಳನ್ನು ಅಳವಡಿಸಲೆಂದು ಕೆಲವು ಪೈಪ್‌ಗ್ಳನ್ನು ಹಾಕಲಾಗಿದೆ. ಅದರ ಮೂಲಕ ನೀರು ದೇಗುಲದ ಒಳಗೆ ಬರುತ್ತಿದೆ. 2ನೇ ಮಹಡಿಯ ನಿರ್ಮಾಣ ಪೂರ್ಣಗೊಂಡರೆ ಈ ಸಮಸ್ಯೆಯೂ ಸರಿಯಾಗಲಿದೆ ಎಂದಿದ್ದಾರೆ.