ಹೊಸನಗರ: ತಾಲೂಕಿನ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ ಬೆಂಗಳೂರು ಪ್ರವಾಸಿಗ ನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಬಸವನಗುಡಿ ಉದ್ಯೋಗಿ, ಬಳ್ಳಾರಿ ನಿವಾಸಿ ವಿನೋದ್ (26) ಜಲಪಾತ ವೀಕ್ಷಿಸುವ ವೇಳೆ ಕಾಲು ಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾನೆ. ಆತ ಮತ್ತೆ ಗುಂಡಿಯಿಂದ ಮೇಲೆ ಬರದ ಹಿನ್ನೆಲೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್ಐ ರಮೇಶ್, ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಾಚರಣೆ ನಡೆಸಲಾಗಿದೆ. ವಿನೋದ್ ಸೇರಿದಂತೆ 12 ಯುವಕರು ವೀಕೆಂಡ್ ಪ್ರವಾಸ ಬಂದಿದ್ದು ಕೊಡಚಾದ್ರಿ ಗಿರಿಯ ಪ್ರವಾಸದ ನಂತರ ಯಡೂರು ಅಬ್ಬಿ ಫಾಲ್ಸ್ ಗೆ ಬಂದಿದ್ದರು.ಕಳೆದ ವರ್ಷ ಕೂಡ ಓರ್ವ ಪ್ರವಾಸಿಗ ಮೃತಪಟ್ಟ ಹಿನ್ನೆಲೆಯಲ್ಲಿ ಅಬ್ಬಿ ಫಾಲ್ಸ್ ಗೆ ತೆರಳುವ ಮಾರ್ಗಕ್ಕೆ ಟ್ರಂಚ್ ಹೊಡೆದು ನಿರ್ಬಂಧಿಸಲಾಗಿತ್ತು. ಆದರೆ ಯುವಕರು ಬಂದಿದ್ದ ಟಿಟಿ ವಾಹನವನ್ನು ನಿಲ್ಲಿಸಿ 1.5 ಕಿಮೀ ನಡೆದುಕೊಂಡೇ ಫಾಲ್ಸ್ ಗೆ ತೆರಳಿದ್ದರು.