Trending

ರಾಜಕೀಯ ನಿವೃತ್ತಿ ಸುಳಿವು ಕೊಟ್ಟ KN ರಾಜಣ್ಣ

Spread the love

ಬಾಗಲಕೋಟೆ: ನಾನು ಡಿಸಿಎಂ ಆಕಾಂಕ್ಷಿಯಲ್ಲ, ನನ್ನದು ಇಲ್ಲವೇ ಇಲ್ಲ, ಇನ್ಮುಂದೆ ಯಾವ ಚುನಾವಣೆಯಲ್ಲಿ ನಾನು ನಿಲ್ಲುವವನೂ ಅಲ್ಲ ಎಂದು ಸಚಿವ ಕೆಎನ್‌ ರಾಜಣ್ಣ ಹೇಳಿದರು.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜಕೀಯ ನಿವೃತ್ತಿಯ ಸುಳಿವು ನೀಡಿದರು. ಯಾವಾಗಲೂ ಕೂಡ ಅಧಿಕಾರ ಹಂಚಿಕೊಂಡಾಗ, ಎಲ್ಲ ಸಮುದಾಯಗಳಿಗೂ ಕೂಡ ಆ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತದೆ, ಸುಮ್ನೆ ಯಾರೋ ಕೆಲವೇ ಜನ ಅಧಿಕಾರ ಇಟ್ಕೊಂಡು, ಬೇರೆಯವರಿಗೆ ಅಧಿಕಾರ ಇಲ್ದೆ ಇದ್ದಾಗ, ಆ ಪಕ್ಷದ ಬಗ್ಗೆ ಪ್ರೀತಿ ಆ ಜನರಲ್ಲಿ ಬರತಕ್ಕಂತದ್ದು ಕಡಿಮೆಯಾಗುತ್ತದೆ, ಆ ದೃಷ್ಟಿಯಿಂದ ‌ನಾನು ಪ್ರತಿಪಾದನೆ ಮಾಡಿದ್ದೆ ಎಂದು ಹೇಳಿದರು.

ಯಾರೆಲ್ಲ ಲಿಂಗಾಯತ ಸಮುದಾಯ ಇರಬಹುದು, ಎಸ್‌ಸಿ, ಎಸ್ ಟಿ ಅಲ್ಪಸಂಖ್ಯಾತ ಸಮುದಾಯ ಆಗಿರಬಹುದು, ಈ ಸಮುದಾಯಗಳಿಗೆ ಒಬ್ರು ಡಿಸಿಎಂ ಮಾಡಬೇಕು, ಹಿಂದೆ‌ ಬಿಜೆಪಿಯವರು ಮಾಡಿದಂತಹ ಉದಾಹರಣೆಗಳು ಇವೆ, ಡಿಸಿಎಂ ಮಾಡಿದಾಕ್ಷಣ ಹೊಸದಾಗಿ ಬೇರೆ ಯಾವ ಸೌಲಭ್ಯ ಇರೋದಿಲ್ಲ, ಕ್ಯಾಬಿನೆಟ್ ಮಂತ್ರಿಗೆ ಏನಿರುತ್ತದೊ ಅವರಿಗೂ ಅದೇ ಇರತಕ್ಕಂತದ್ದು, ಆದರೂ ಒಂದು ಗೌರವಪೂರ್ವ ಸಮುದಾಯದ ಜನರಲ್ಲಿ, ನಮ್ಮ‌ ಸಮುದಾಯಕ್ಕೂ ಪ್ರಾತಿನಿದ್ಯ ದೊರೆತಿದೆ, ಆ ದೃಷ್ಟಿಯಲ್ಲಿ ನಮಗೂ ಕೂಡ ಹೆಮ್ಮೆ ಅಂತ ಮನಸ್ಥಿತಿಯಲ್ಲಿ ಇರುತ್ತಾರೆ, ಆ ಮೂಲಕ ಆಯಾ ಸಮುದಾಯದ ಜನರ ಪ್ರೀತಿ ಗಳಿಸಿಕೊಳ್ಳಲು ಇದೊಂದು ಉತ್ತಮ ಸಾಧನ, ಅದಕ್ಕಾಗಿ ನಾನು ಡಿಸಿಎಂ ಮಾಡಬೇಕು ಅಂತ ಹೇಳಿದ್ದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಅನ್ನೋದು ಮಾಧ್ಯಮಗಳ ಸೃಷ್ಠಿ, ಗ್ಯಾರಂಟಿ ನಿಲ್ಲಿಸಿಬಿಡ್ತಾರೆ, ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದೆ, ಶಾಸಕರು ಚರ್ಚೆ ಮಾಡ್ತಿರೋದು ನಿಮ್ಮ ಸೃಷ್ಟಿ ಎಂದು ಹೇಳಿದರು, ಯಾರೊಬ್ಬರೂ ಗ್ಯಾರಂಟಿ ನಿಲ್ಲಿಸಬೇಕೆಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲ್ಲ, ಸಿಎಂ ಕೂಡಾ ಗ್ಯಾರಂಟಿ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಗ್ಯಾರಂಟಿ ಮುಂದುವರೆಸುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ, ನಾನೂ ಕೂಡಾ ಸ್ಪಷ್ಟ ಮಾಡ್ತೀನಿ ಬಡವರಿಗೆ ನೀಡಿದ ಸೌಲಭ್ಯಗಳು ಕುಂಠಿತವೂ ಆಗಲ್ಲ, ಕಡಿತವೂ ಆಗಲ್ಲ ಎಂದು ಹೇಳಿದರು.

 

[pj-news-ticker]