ಕೊಟ್ಟಾಯಂ(ಕೇರಳ) : ಕಟ್ಟಡದಿಂದ ಬಿದ್ದು ಕರ್ತವ್ಯನಿರತ ಸಬ್ ಇನ್ಸ್ ಪೆಕ್ಟರ್ ಮೃತಪಟ್ಟಿರುವ ಘಟನೆ ಕೇರಳದ ರಾಮಪುರಂನಲ್ಲಿ ಶನಿವಾರ (ಮೇ.13 ರಂದು) ನಡೆದಿದೆ.
ಮೃತರನ್ನು ರಾಮಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕುರವಿಲಂಗಾಡ್ ಮೂಲದ ಜೋಬಿ ಜಾರ್ಜ್ (52) ಎಂದು ಗುರುತಿಸಲಾಗಿದೆ.
ಜೂಜಾಟ ಆಡುತ್ತಿದ್ದಾರೆ ಎನ್ನುವ ಮಾಹಿತಿಯ ಮೇರೆಗೆ ಜೋಬಿ ಜಾರ್ಜ್ ಅವರು ರಾಮಪುರಂ ಬಸ್ ಡಿಪೋ ಬಳಿಯ ಬಿಲ್ಡಿಂಗ್ ವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಕಟ್ಟಡದ ಮೂರನೇ ಮಹಡಿಯಯಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ತಡರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.