Trending

ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಹಣ ವಶಕ್ಕೆ!

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹೆಸರು ಹೇಳದಿರಲು ಹಂತಕರಿಗೆ ನೀಡಲು ರೆಸ್ಟೋರೆಂಟ್ ವೊಂದರಲ್ಲಿ ಇರಿಸಿದ್ದ ರೂ.30 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.

ಆರ್‌.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಕರಣದಲ್ಲಿ ಬಂಧಿತನಾಗಿರುವ ವಿನಯ್ ಮಾಲೀಕತ್ವದ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ 30 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಈ ಹಣ ಕೊಲೆ ಆರೋಪ ಹೊರುವ ಯುವಕರಿಗೆ ನೀಡಲು ಇಟ್ಟಿದ್ದ ಹಣ ಎನ್ನಲಾಗಿದೆ. ಕೊಲೆ ನಾವೇ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿಗೆ ತಲಾ 5 ಲಕ್ಷ ನೀಡಲು ಹಣ ಇಡಲಾಗಿತ್ತು.

ಹಲ್ಲೆ ಸಮಯದಲ್ಲಿ ಪವಿತ್ರಾ ಗೌಡ ಕಾಲಿಗೆ ರೇಣುಕಾಸ್ವಾಮಿಯನ್ನು ಬೀಳಿಸಿದ್ದ, ಡಿ ಗ್ಯಾಂಗ್ ಕ್ಷಮಾಪಣೆ ಕೇಳಿಸಿತ್ತು ಎನ್ನಲಾಗಿದೆ.

ಅಕ್ಕನ ಕಾಲಿಗೆ ಬೀಳೋ ಎಂದು ಹಿಂಸೆ ನೀಡಲಾಗಿದೆ. ದರ್ಶನ್ ಹೊಡೆತಕ್ಕೆ ನೋವು ತಾಳಲಾರದೆ ಪವಿತ್ರಾ ಗೌಡ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಅಂಗಲಾಚಿಕೊಂಡಿದ್ದ. ಮೇಡಂ ತಪ್ಪಾಯಿತು, ಕ್ಷಮಿಸಿ ಬಿಡಿ, ನಿಮ್ಮ ಕಾಲು ಹಿಡಿದುಕೊಳ್ಳುತ್ತೇನೆಂದು ಎಂದು ಗೋಗರೆದಿದ್ದ. ಆಗ ತಪ್ಪಾಯಿತು ಸಾರ್ ಎಂದು ಕಾಲಿಗೆ ಬಿದ್ದಾಗ, ದರ್ಶನ್ ಎಗ್ಗರರಿ ಒದ್ದಿದ್ದರು ಎಂದು ಸ್ಥಳ ಮಹಜರು ಮಾಡುವಾಗ ಈ ಬಗ್ಗೆ ಪೊಲೀಸರಿಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

[pj-news-ticker]