ನಾಗರಾಜ್, ಸಾಗರ
ಸಾಗರ : ಕಾಗೋಡು ತಿಮ್ಮಪ್ಪರಿಲ್ಲದ ಮೊದಲ ಚುನಾವಣೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಕಾಗೋಡು ತಿಮ್ಮಪ್ಪನವರ ಸ್ಥಾನವನ್ನು ಪುತ್ರಿ ರಾಜನಂದಿನಿ ತುಂಬುತ್ತಾರೆ ಎಂದು ಕಾರ್ಯಕರ್ತರು ಲೆಕ್ಕ ಹಾಕಿದ್ದರು. ಆದರೆ ಕಾಂಗ್ರೆಸ್ ಪಕ್ಷ ಗೋಪಾಲಕೃಷ್ಣ ಬೇಳೂರುಗೆ ಮಣೆ ಹಾಕಿದ್ದರಿಂದ ಮುನಿಸಿಕೊಂಡ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಪಕ್ಷವನ್ನು ಸೇರಿದ್ದರು. ಬಿಜೆಪಿಯಿಂದ ಹರತಾಳು ಹಾಲಪ್ಪ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಇವರ ಮಧ್ಯೆ ಜೆ. ಡಿ.ಎಸ್ ಹಾಗೂ ಪಕ್ಷೇತರ ತಿ.ನಾ.ಶ್ರೀನಿವಾಸ್ ಮತ್ತು ಆಮ್ ಆದ್ಮಿ ಪಕ್ಷದ ಕೆ.ದಿವಾಕರ್ ರವರ ಪಡೆಯುವ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಅಭಿವೃದ್ಧಿ ಮಂತ್ರಗಳನ್ನು ಪಠಿಸುತ್ತಿರುವ ಹಾಲಿ ಶಾಸಕರಾಗಿರುವ ಬಿ.ಜೆ.ಪಿ ಯ ಹರತಾಳು ಹಾಲಪ್ಪ ಸ್ವಪಕ್ಷದವರ ಮತಗಳನ್ನು ಪಡೆಯುವುದು ತುಂಬಾ ಕಷ್ಟ ಸಾಧ್ಯ ಎನ್ನುವ ಕೂಗು ಕೇಳಿಬರುತ್ತಿದೆ. ನಾಮಪತ್ರ ಸಲ್ಲಿಕೆಯ ಆದಗಿನಿಂದ ಇಲ್ಲಿಯವರೆಗೆ ಹಾಲಪ್ಪ ನವರ ವಿರುದ್ಧ ಪತ್ರಿಕಾ ಹೇಳಿಕೆ ಗಳು ನಡೆದಿದ್ದೆ ಹೆಚ್ಚು ಆದರೂ ಕೂಡ ಬಿ.ಜೆ.ಪಿ ಯ ಸ್ವಂತ ಮತಗಳ ಮೇಲೆ ಹಾಲಪ್ಪ ನವರ ಭವಿಷ್ಯ ನಿರ್ಣಯ ವಾಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹಾಗೆಯೇ ಕಾಂಗ್ರೆಸ್ ನ ಗೋಪಾಲಕೃಷ್ಣ ನ ಬೆನ್ನಿಗೆ ಮಾಜಿ ಸಚಿವರಾದ ಹಿರಿಯ ಧುರೀಣ ಕಾಗೋಡು ತಿಮ್ಮಪ್ಪ ನವರ ಶ್ರೀ ರಕ್ಷೆ ಇದೆ ಎನ್ನುವುದು ಜಗಜ್ಜಾಹೀರ ಹಾಗೂ ಎರಡು ಬಾರಿ ಶಾಸಕರಾದರೂ ಅಭಿವೃದ್ಧಿ ಕೆಲಸಗಳು ಆಗದಿದ್ದರೂ ಸ್ನೆಹ ಜೀವಿಯಾದ ಎಲ್ಲರ ಜೊತೆಯಲ್ಲಿ ಬೆರೆಯುವ ಸ್ವಭಾವ ಹಾಗೂ ಈ ಬಾರಿಯ ಕಾಂಗ್ರೆಸ್‌ನ ಅಲೆ ಬೇಳೂರಿಗೆ ವರವಾಗಲಿದೆ ಎನ್ನುವುದು ಮತ್ತು ಕಾಗೋಡು ತಿಮ್ಮಪ್ಪ ನವರ ಮಗಳನ್ನು ಪಕ್ಷಕ್ಕೆ ಸೆಳೆದು ತಿಮ್ಮಪ್ಪ ನವರಿಗೆ ನೋವನ್ನುಂಟು ಮಾಡಿದ್ದು , ಅನುಕಂಪದ ಅಲೆ ಕಾಂಗ್ರೆಸ್ ಗೆ ವರದಾನವಾಗಲಿದೆ ಎನ್ನುವುದು ಚರ್ಚಾ ವಿಷಯವಾಗಿದೆ.
ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷವಾದ ಜೆ.ಡಿ.ಎಸ್ ಸೈಯದ್ ಜಾಕೀರ್ ಕಾಂಗ್ರೆಸ್ ನ ಅಲ್ಪ ಸಂಖ್ಯಾತರ ಮತಗಳನ್ನು ಸೆಳೆದು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎನ್ನುವುದು ಚರ್ಚಾ ವಿಷಯವಾಗಿದೆ . ಮತ್ತು ಕೆ.ದಿವಾಕರ್ ಅಭ್ಯರ್ಥಿ ಯಾಗಿರುವ ಆಮ್ ಆದ್ಮಿ ಪಕ್ಷ ಬಿ.ಜೆ.ಪಿ ಯ ಬ್ರಾಹ್ಮಣ ಮತಗಳನ್ನು ಪಡೆಯುವಲ್ಲಿ ಸಫಲವಾಗಬಹುದು ಎಂಬುದು ಒಂದೆಡೆ ಚರ್ಚೆಯಾಗುತ್ತಿದೆ .
ಹಾಗೆಯೇ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಮಲೆನಾಡು ರೈತ ಸಂಘಟನೆ ಮುಖಾಂತರ ಮುನ್ನೆಲೆಗೆ ಬಂದಿರುವ ಈ ಬಾರಿ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ತೀ. ನಾ .ಶ್ರೀನಿವಾಸ್ ಕೂಡ ಸಾಗರ ವಿಧಾನ ಸಭೆಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಯಾಗುತ್ತಿದೆ .ಹಾಗೆಯೇ ಈ ಬಾರಿ ಅನೇಕ ಅಭ್ಯರ್ಥಿ ಗಳು ಪಕ್ಷೆತರರಾಗಿ ಸ್ಪರ್ಧಾ ಕಣದಲ್ಲಿ ಇದ್ದಾರೆ.
ಕೆ ಆರ್.ಎಸ್.ಪಕ್ಷ ದ ಬಿ.ಈ. ಕಿರಣ್ ,ಮತ್ತು ಉತ್ತಮ ಪ್ರಜಾಕೀಯ ಪಾರ್ಟಿ -ಸೋಮರಾಜ್ ,ಹಾಗೂ ಶಿವಕುಮಾರ್ ಕೆ.ವಿ ,ಮತ್ತು ಹರಟೆ ಗಾಮಪ್ಪ ಇವರೆಲ್ಲ ಪಡೆಯುವ ಮತಗಳು ಈ ಬಾರಿ ಸಾಗರದ ವಿಜಯಶಾಲಿ ಅಭ್ಯರ್ಥಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂಬುದು ಸಾರ್ವಜನಿಕವಾಗಿ ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ . ಆದರೂ ಈ ಬಾರಿಯ ವಿಶ್ಲೇಷಣೆ ಪ್ರಕಾರ ಮತದಾರ ಒಲೈಕೆಗೆ ಬೆಲೆ ಕೊಡದೆ ಸೂಕ್ತ ಅಭ್ಯರ್ಥಿ ಯನ್ನು ಆಯ್ಕೆ ಮಾಡುತ್ತಾನೆ ಎಂಬುದು ಚರ್ಚಾ ವಿಷಯವಾಗಿದೆ.
ಮತದಾರರ ಸಂಖ್ಯೆ
– ಪುರುಷ ಮತದಾರರು- 100317
– ಮಹಿಳಾ ಮತದಾರರು-102432
– ಒಟ್ಟು ಮತದಾರರು- 202750