ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮೇ. 10ರಂದು ಕುವೆಂಪು ಅವರ ಕವಿಶೈಲ ಸ್ಮಾರಕವು ಮುಚ್ಚಿರುತ್ತದೆ.
ಕುಪ್ಪಳಿಯ ಕವಿಮನೆ, ಕವಿಶೈಲದ ಸ್ಮಾರಕ ಮತ್ತು ಹಿರೇಕೂಡಿಗೆ ಕವಿ ಜನ್ಮಸ್ಥಳ ಸ್ಮಾರಕವು ಬುಧವಾರ ಮುಚ್ಚಿರುತ್ತದೆ. ಆ ದಿನ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.