Spread the love

ಸಿಡ್ನಿ: ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆಸ್ಟ್ರೇಲಿಯದ ರೂಪದರ್ಶಿ ಸಿಯೆನ್ನಾ ವೀರ್ (23) ಜೀವನ್ಮರಣ ಹೋರಾಟ ಮಾಡಿ ಕೊನೆಯುಸಿರೆಳೆದಿದ್ದಾರೆ.

ಎ. 2 ರಂದು ಸಿಯೆನ್ನಾ ವೀರ್ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ತನ್ನ ಮೆಚ್ಚಿನ ಹವ್ಯಾಸದಲ್ಲಿ ಒಂದಾಗಿರುವ ಕುದುರೆ ಸವಾರಿಯನ್ನು ಮಾಡುತ್ತಿದ್ದ ವೇಳೆ ಕುದುರೆ ಕೆಳಕ್ಕೆ ಬಿದ್ದಿದೆ. ಇದರಿಂದ ಗಂಭೀರ ಸ್ವರೂಪದ ಗಾಯಗೊಂಡಿದ್ದ ಅವರನ್ನು ವೆಂಟಿಲೇಟರ್‌ ನಲ್ಲಿ ಇಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇಷ್ಟು ದಿನಗಳಿಂದ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕೃತಕ ಉಸಿರಾಟದ ನೆರವನ್ನು ( ಮೇ. 4 ರಂದು) ತೆಗೆಯಲು ಹೇಳಿದ್ದಾರೆ.

ಸಿಯೆನ್ನಾ ವೀರ್ ಅವರ ಮಾಡೆಲಿಂಗ್ ಸಂಸ್ಥೆ ಸ್ಕೂಪ್ ಮ್ಯಾನೇಜ್‌ಮೆಂಟ್ ರೂಪದರ್ಶಿಯ ಹಲವು ಫೋಟೋಗಳನ್ನು ಹಂಚಿಕೊಂಡು ಅವರ ನಿಧನದ ಸುದ್ದಿಯನ್ನು ಅಧಿಕೃತವಾಗಿ ಹೇಳಿದೆ.

2022 ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಒಬ್ಬರಾಗಿದ್ದರು. ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದಿದ್ದರು.

ರೂಪದರ್ಶಿ ಅನಿರೀಕ್ಷಿತ ನಿಧನದ ಸುದ್ದಿಯನ್ನು ಕೇಳಿ ಫ್ಯಾಷನ್‌ ಲೋಕದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *