ದಾವಣಗೆರೆ: ಸೂಡಾನ್ ನಲ್ಲಿ ಸಿಲುಕಿ ಕೊಂಡಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಇಬ್ಬರು ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ಕಾವ್ಯಶ್ರೀ ಮತ್ತು ಭವಾನಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದವರು. ಕಾವ್ಯಶ್ರೀ ಮತ್ತು ಭವಾನಿ ಶಂಕರ್ ಅವರಿಬ್ಬರೂ ತಮ್ಮ ಸ್ವಗ್ರಾಮಕ್ಕೆ ವಾಪಾಸಾದರು.
ಸೂಡಾನ್ ರಾಜಧಾನಿ ಖಾರ್ಟೂಮ್ ನಿಂದ ಬಸ್ ಮೂಲಕ ಬಂದರುಗೆ ಆಗಮಿಸಿದ್ದ 72 ಜನ ಕನ್ನಡಿಗರಲ್ಲಿ ಈ ಇಬ್ಬರು ಇದ್ದರು. ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿ ಮತ್ತು ಗೋಪನಾಳ್ ಗ್ರಾಮದ ಇತರರು ಸೌದಿ ಅರೇಬಿಯಾದ ಜೆಡ್ಡಾದಲ್ಲಿದ್ದಾರೆ. ಇನ್ನರೆಡು ದಿನಗಳಲ್ಲಿ ಸ್ವಗ್ರಾಮಕ್ಕೆ ಮರಳಲಿದ್ದಾರೆ.
ಕಾವ್ಯಶ್ರೀ ಮತ್ತು ಭವಾನಿ ಶಂಕರ್ ವ್ಯಾಪಾರಕ್ಕಾಗಿ ಸುಡಾನ್ ಗೆ ತೆರಳಿದ್ದರು. ಈಚೆಗೆ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಭೀಕರ ಸಂಘರ್ಷದ ನಡುವೆ ಸಿಲುಕಿಕೊಂಡಿದ್ದರು. ಆಪರೇಷನ್ ಕಾವೇರಿ ಮೂಲಕ ಕೇಂದ್ರ ಸರ್ಕಾರ ಸೂಡಾನ್ ನಲ್ಲಿನ ಭಾರತೀಯರನ್ನು ಕರೆ ತರುವ ಕಾರ್ಯಾಚರಣೆ ಕೈಗೊಂಡಿದೆ.