Spread the love

ಸೊರಬ: ಇಡೀ ರಾಜ್ಯದಲ್ಲಿ ಗಮನ ಸೆಳೆಯುವ ಕ್ಷೇತ್ರವಾಗಿರುವ ಸೊರಬದಲ್ಲಿ ಈ ಬಾರಿಯೂ ಕೂಡ ಸಹೋದರರ ಸವಾಲ್ ಎಂಬಂತಾಗಿದೆ.  ಸೊರಬ ಕ್ಷೇತ್ರದಲ್ಲಿ ಮತ್ತೊಮ್ಮೆ ಸಹೋದರರ ಆರ್ಭಟ ಜೋರಾಗಿದೆ.  ನಾಮಪತ್ರ ಸಲ್ಲಿಕೆ ವೇಳೆ, ಸಹೋದರರು ಮುಖಾಮುಖಿಯಾಗಿದ್ದು, ನಾನಾ, ನೀನಾ ಎಂಬಂತಾಗಿದೆ.

ಸೊರಬ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗಾದಿಂದ  ಸಹೋದರರಿಬ್ಬರ ಮೆರವಣಿಗೆ ಆರಂಭವಾಯಿತು. ಮೊದಲು ಕುಮಾರ್ ಬಂಗಾರಪ್ಪ ಬೆರಳೆಣಿಕೆಯ ಜನಸಮೂಹದ ನಡುವೆ ಮೆರವಣಿಗೆ ಸಾಗಿ ಬಿ‌ಜೆ‌ಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಸುಮಾರು 25  ಸಾವಿರಕ್ಕೂ ಅಧಿಕ ಜನಸಾಗರದ ನಡುವೆ ಮೆರವಣಿಗೆಯಲ್ಲಿ ಸಾಗಿ  ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದರೊಡನೆ  ಸೊರಬದಲ್ಲಿ ಚುನಾವಣೆಯ ಕಾವು ಏರಿದಂತಾಗಿದೆ.

ಮೆರವಣಿಗೆ ಉದ್ದಕ್ಕೂ ಮಧು ಬಂಗಾರಪ್ಪಗೆ ಬಹುಪರಾಕ್ ಎಂದರು.  ಮಧು ಪರ ಘೋಷಣೆ ಕೂಗಿ ಮುಂದಿನ ಎಂ.ಎಲ್.ಎ. ಮಧು ಬಂಗಾರಪ್ಪ ಎಂದು ಸಂತಸ ವ್ಯಕ್ತಪಡಿಸಿದರು.  ಈ ವೇಳೆ ತಮ್ಮ ಸಹೋದರಿ ಗೀತಾ ಶಿವರಾಜ್ ಕುಮಾರ್, ಶ್ರೀಮತಿ ಮಧುಬಂಗಾರಪ್ಪ, ಸುಜಾತ ತಿಲಕ್ ಕುಮಾರ್, ಸೇರಿದಂತೆ ತಾಲೂಕು ಮುಖಂಡರೊಂದಿಗೆ ತಾಲೂಕು ಕಚೇರಿಗೆ ತೆರಳಿದ ಮಧು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು.

ಈ ಎರಡು ಮೆರವಣಿಗೆಯನ್ನು ಗಮನಿಸಿದ ಸೊರಬದ ಜನತೆ,  ಕುಮಾರ್ ಬಂಗಾರಪ್ಪ ಮೆರವಣಿಗೆಯಲ್ಲಿ ಸಾಗುವಾಗ ಭವ್ಯ ಪುಷ್ಪಾಲಾಕೃಂತವಾದ ಒಂದಿಷ್ಟು ಬಿಸಿಲು ನಾಯಕರುಗಳ  ತಲೆಯ ಮೇಲೆ ಬೀಳದಂತೆ, ಬರೀ  ಅವರ ತಲೆಯ ಮೇಲೆ ಮಾತ್ರ ಬಿಸಿಲು ಬೀಳದಂತೆ, ಉಳಿದ ನಾಯಕರುಗಳು ಬಿಸಿಲಿನಲ್ಲಿ ನಿಲ್ಲುವಂತೆ    ವೇದಿಕೆ ಸಿದ್ದಪಡಿಸಿದ್ದು,  ಅದು ರಾಜ ಮೆರವಣಿಗೆಯಂತೆ ಕಂಡರೆ, ಅದೇ ಮಧು ಬಂಗಾರಪ್ಪ ಉರಿ ಬಿಸಿಲನ್ನು ಲೆಕ್ಕಿಸದೆ ಜನಸಾಗರದ ನಡುವೆ ತೆರೆದ ವಾಹನದಲ್ಲಿ  ಕೈಯಲ್ಲಿ ಮೈಕ್ ಹಿಡಿದು ಪಟ್ಟಣದ ಇಕ್ಕಲೆಗಳಲ್ಲಿ ನಿಂತಿದ್ದ ಜನರೊಡನೆ ಸಂಭಾಷಣೆ ನಡೆಸುತ್ತಾ, ಕೈ ಬೀಸುತ್ತಾ ಸಾಗುತ್ತಿದ್ದ ದೃಶ್ಯ ಜನಸಾಮಾನ್ಯ ನಾಯಕನ ಹೆಮ್ಮೆಯ ಮೆರವಣಿಗೆಯಾಗಿ ಕಾಣುತ್ತಿತ್ತು. ಇದನ್ನು  ಕಂಡ ಜನಸಾಗರ ಇವರು ನಮ್ಮ ನಾಯಕರು, ಈ ದೃಶ್ಯವನ್ನ ಕಂಡ ಸೊರಬದ ಜನತೆ  ಮಧುಬಂಗಾರಪ್ಪನವರು  ಬಂಗಾರಪ್ಪಜಿಯನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡಿದ್ದಾರೆ  ಎಂದು ಜನ ಮಾತನಾಡಿಕೊಳ್ಳುತ್ತಿದ್ದದ್ದು ಕಂಡು ಬಂತು.

Leave a Reply

Your email address will not be published. Required fields are marked *