Spread the love

ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿಜಗದೀಶ ಶೆಟ್ಟರ್ ಭಾರತೀಯಜನತಾ ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದು ಪಕ್ಷದ್ರೋಹ ಮತ್ತು ಅಕ್ಷಮ್ಯ ಅಪರಾಧ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ತಮ್ಮ ಪಕ್ಷ ಎಲ್ಲಾ ರಾಜಕೀಯ ಸ್ಥಾನ ಮಾನಗಳನ್ನು ಕೊಟ್ಟಿದ್ದರೂ ಕಳೆದ 5 ವರ್ಷಗಳ ಹಿಂದೆ ತಾವೇ ಭಾರತೀಯ ಜನತಾ ಪಕ್ಷವನ್ನು ತ್ಯಜಿಸಿ, ಕೆ.ಜೆ,ಪಿ. ಕಟ್ಟಿದ್ದು ಪಕ್ಷದ್ರೋಹ, ಅಕ್ಷಮ್ಯ ಅಪರಾಧವಲ್ಲವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಪ್ರಶ್ನಿಸಿದ್ದಾರೆ.

ಕಳೆದ ಮೂರುವರೆ ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ 22 ಜನಚುನಾಯಿತ ಶಾಸಕರನ್ನು ಬಿ.ಎಸ್,ಯಡಿಯೂರಪ್ಪರ ಕುಮ್ಮಕ್ಕಿನಿಂದ ಆಮಿಷ್ಯ ತೋರಿಸಿ ಕರೆದೊಯ್ದು ಸರ್ಕಾರ ಮಾಡಿದಾಗ, ವಿರೋಧ ಪಕ್ಷಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳದೆ ನಮ್ಮ ಮೇಲೆ ಗೂಬೆ ಕೂರಿಸುತ್ತಿವೆ ಎಂದಿದ್ದರು. ಈಗ ನಿಮ್ಮ ಶಾಸಕರನ್ನು ನೀವೇಕೆ ಹಿಡಿದಿಟ್ಟುಕೊಳ್ಳಲಿಲ್ಲ. ಕಳೆದ 40 ವರ್ಷಗಳಿಂದ ಅಧಿಕಾರ ಅನುಭವಿಸಿದ್ದ ಯಡಿಯೂರಪ್ಪರವರು ಕೆ.ಜೆ.ಪಿ.ಕಟ್ಟುವ ಮೂಲಕ ಮಾಡಿದ ಪಕ್ಷದ್ರೋಹ, ಅನಾಚಾರ ಸರಿಯಾದುದ್ದುಎಂದಾದರೆ, ಈಗ ಬಿ.ಜೆ,ಪಿ. ನಾಯಕರಾದಜಗದೀಶ ಶೆಟ್ಟರ್, ಲಕ್ಷ್ಮಣ್ ಸವದಿ ಇತರರು ಬಿ.ಜೆ.ಪಿ. ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿರುವ ನಿರ್ಧಾರವೂ ಸರಿಯಾದುದ್ದೆ ಆಗಿದೆ ಎಂದು ಸಮರ್ಥಿಸಿಕೊಂಡಿರುವ ವೈ.ಬಿ.ಚಂದ್ರಕಾಂತ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಕಗ್ಗೊಲೆ ಮಾಡುವರೀತಿಯಲ್ಲಿ ಒಂದು ಚುನಾಯಿತ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಶಾಸಕರನ್ನು ಖರೀದಿಸುವಂತಹ  ಭ್ರಷ್ಟಾತಿ ಭ್ರಷ್ಟ ವ್ಯವಸ್ಥೆಯ ಹುಟ್ಟು ಹಾಕಿದ ಮಹಾನ್‍ಕೀರ್ತಿ ಬಿ.ಎಸ್.ಯಡಿಯೂರಪ್ಪರಿಗೆ ಸಲ್ಲಬೇಕುಎಂದು ವೈ.ಬಿ.ಚಂದ್ರಕಾಂತ್‍ಕುಟುಕಿದ್ದಾರೆ.

ಕರ್ನಾಟಕಜನತಾ ಪಕ್ಷಕಟ್ಟಿ ಮಹಾ ಅಪರಾಧ ಮಾಡಿದ್ದರ ಬಗ್ಗೆ ನಾನು ಈಗಾಗಲೆ ಕ್ಷಮೆ ಕೇಳಿದ್ದೇನೆಂದು ಬಿ,ಎಸ್.ಯಡಿಯೂರಪ್ಪನವರು ಹೇಳಿರುವುದು ತಮ್ಮ ವಯಸ್ಸಿಗೂ, ರಾಜಕೀಯ ಅನುಭವಕ್ಕೂ ತಾವೇ ಮಾಡಿಕೊಂಡ ದೊಡ್ಡ ಅವಮಾನವಾಗಿದೆ. ಈಗಲೂ ಸಹ ಭಾರತೀಯ ಜನತಾ ಪಕ್ಷದದೆಹಲಿ ನಾಯಕರ ಮೇಲೆ ಬಿ.ಎಸ್.ಯಡಿಯೂರಪ್ಪರವರಿಗೆ ಕೋಪವಿದ್ದರೂ ಬಿ.ಜೆ.ಪಿ.ಯದೊಡ್ಡ ನಾಯಕರುತಮಗೆ ತೋರಿಸಿರುವ ಇ.ಡಿ, ಸಿ.ಬಿ.ಐ. ನಂತಹ ಗುಮ್ಮಗಳಿಗೆ ಹೆದರಿ ಮನಸ್ಸಿಲ್ಲದ ಮನಸ್ಸಿನಿಂದ ಭಾರತೀಯ ಜನತಾ ಪಕ್ಷದಲ್ಲಿ ಇರುವುದನ್ನು ಬಿ.ಎಸ್.ಯಡಿಯೂರಪ್ಪನವರು ಈಗಲಾದರೂರಾಜ್ಯದ ಜನರ ಮುಂದೆ ಒಪ್ಪಿಕೊಳ್ಳುವ ದೈರ್ಯವನ್ನುತೋರಿಸಬೇಕೆಂದು.ಭಾರತೀಯಜನತಾ ಪಕ್ಷದ ನಾಯಕರ ಅನಾಚಾರ ಮತ್ತು ಬ್ಲಾಕ್‍ಮೇಲ್‍ರಾಜಕೀಯವನ್ನು ಗಟ್ಟಿ ಧೈರ್ಯ ಮಾಡಿ ಹೊರಗೆ ಎಳೆಯಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ,ಬಿ,ಚಂದ್ರಕಾಂತ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *