Breaking
Sat. Apr 20th, 2024

ಮುಂದೆ ಜೆಡಿಎಸ್ ಪಕ್ಷ ಇರುವುದೇ ಇಲ್ಲ- ಡಿಸಿಎಂ ಡಿ.ಕೆ ಶಿವಕುಮಾರ್ ಭವಿಷ್ಯ

By Mooka Nayaka News Apr 2, 2024
Spread the love

ಬೆಂಗಳೂರು : ತಮ್ಮ ಸರ್ಕಾರವನ್ನ ತೆಗೆದ ಬಿಜೆಪಿ ಜೊತೆಯೇ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದು ನೀಚ ರಾಜಕಾರಣ ಎಂದು ಜನರಿಗೆ ಗೊತ್ತಾಗಿದೆ. ಮುಂದೆ ಜೆಡಿಎಸ್ ಪಕ್ಷ ಇರುವುದೇ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ದೇವೇಗೌಡರು ಅಳಿಯನನ್ನೇ ಬಿಜೆಪಿಯಿಂದ ಚುನಾವಣೆಗೆ ನಿಲ್ಲಿಸಿದ್ರು. ಹಾಗಾದ್ರೆ ಜೆಡಿಎಸ್ ಚಿಹ್ನೆಗೆ ಬೆಲೆ ಇಲ್ವಾ ..? ಜೆಡಿಎಸ್ ನಾಯಕರ ನಿರ್ಧಾರದಿಂದ ಕಾರ್ಯಕರ್ತರಿಗೆ ನೋವಾಗಿದೆ. ಮುಂದೆ ಜೆಡಿಎಸ್ ಪಕ್ಷ ಇರುವುದೇ ಇಲ್ಲ. ಹೀಗಾಗಿ ಬಹಳಷ್ಟು ನಾಯಕರು ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆ ಬರುತ್ತಿದ್ದಾರೆ ಎಂದರು.

ಬಿಜೆಪಿ ವಿರುದ್ದವೂ ಗುಡುಗಿದ ಡಿ.ಕೆ ಶಿವಕುಮಾರ್, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ  ಗೆಲ್ಲೋಕೆ ಆಗಲ್ಲ  ಎಂದು 12ರಿಂದ  13 ಸೀಟ್ ಬದಲಾವಣೆ ಮಾಡಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

Related Post