Breaking
Sat. Apr 20th, 2024

ನಾನು ಇರಬೇಕಾದರೆ ವರುಣಾದಲ್ಲಿ 60 ಸಾವಿರ ಲೀಡ್​ ಕೊಡಿ: ಸಿದ್ದರಾಮಯ್ಯ

By Mooka Nayaka News Apr 1, 2024
Spread the love

ವರುಣಾ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಸ್ವ ಕ್ಷೇತ್ರ ವರುಣಾದ ಬಿಳಿಗೆರೆ ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಅವರು ನೀಡಿದ ಮಹತ್ವದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ‘ ನಾನು ಇರಬೇಕಲ್ಲ, ಹಾಗಾದರೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಈ ಕ್ಷೇತ್ರದಿಂದ 60 ಸಾವಿರ ಲೀಡ್ ಕೊಡಬೇಕು’ ಎಂದು ಮತದಾರರ ಬಳಿ ಮನವಿ ಮಾಡಿದ್ದಾರೆ.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ,”ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರನ್ನು ನನಗಿಂತಲೂ ಹೆಚ್ಚು 60 ಸಾವಿರ ಮತಗಳ ಲೀಡ್ ಕೊಟ್ಟು ಗೆಲ್ಲಿಸಬೇಕು. ಆಗ  ಯಾರೂ ನನ್ನನ್ನು ಮುಟ್ಟಲು ಆಗಲ್ಲ, ನಾನು ಇರಬೇಕಾ, ಬೇಡವಾ? ನಾನು ಇರಬೇಕು ಅಂದರೆ 60 ಸಾವಿರ ಲೀಡ್ ಕೊಡಿ” ಎಂದು ಒತ್ತಿ ಹೇಳಿದ್ದಾರೆ.

ಪ್ರಚಾರ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್ ಸೇರಿ ಸ್ಥಳೀಯ ಮುಖಂಡರು ಸಭೆಯಲ್ಲಿದ್ದರು

ಹೇಳಿಕೆ ಕುರಿತು ಚರ್ಚೆ

ಸ್ವಕ್ಷೇತ್ರದಲ್ಲಿ ಸಿಎಂ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಹೈಕಮಾಂಡ್ ಸಿಎಂ ಸೇರಿ ಸಚಿವರೆಲ್ಲರಿಗೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವ ಟಾಸ್ಕ್ ನೀಡಿದ್ದು, ವಿಫಲವಾದಲ್ಲಿ ಬದಲಾವಣೆಯ ಸೂಚನೆಯನ್ನೂ ನೀಡಿದೆ ಎನ್ನಲಾಗಿದೆ.ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಟಕ್ಕಿಳಿದು ನಾನಾ ರಣತಂತ್ರಗಳನ್ನು ಹಣೆಯುತ್ತಿದ್ದಾರೆ.

Related Post