Spread the love

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಈಗಾಗಲೇ ಬಿಜೆಪಿ ವರಿಷ್ಠರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಆ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದೆ. ನಾಳೆ ಮತ್ತೆ ಮುಂದುವರಿಯುತ್ತದೆ ಎಂದರು.

224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಇಲ್ಲ: ಯಾವ ಭಾಗದಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಇಲ್ಲ, ನಾಳೆ ಒಂದು ಸ್ಪಷ್ಟ ಚಿತ್ರಣ ಹೊರಬರಲಿದೆ. ಹಾಲಿ 20ಕ್ಕೂ ಹೆಚ್ಚು ಶಾಸಕರ ಟಿಕೆಟ್ ಕೈತಪ್ಪಿಹೋಗಲಿದೆ ಎಂಬುದೆಲ್ಲ ಊಹಾಪೋಹಗಳಷ್ಟೆ, ಈಗಾಗಲೇ ಎರಡು ಬಾರಿ ಚರ್ಚೆಯಾಗಲಿದೆ ಅದರ ಫಲಶ್ರುತಿ ನಾಳೆ ಹೊರಬರಲಿದ್ದು, ನಾಳೆ ಸಂಸದೀಯ ಮಂಡಳಿ ಸಭೆ ನಡೆದ ಬಳಿಕ ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ರಾಜಕೀಯ ಚರ್ಚೆಗಳಲ್ಲಿ ಬಹಳಷ್ಟು ವಿಚಾರಗಳು ಚರ್ಚೆಯಾಗುತ್ತವೆ. ನಿರ್ಧಾರ ತೆಗೆದುಕೊಳ್ಳುವ ಕೊನೆ ಗಳಿಗೆ ಇನ್ನೂ ಬಂದಿಲ್ಲ. ಆ ಗಳಿಗೆ ಬಂದ ಕೂಡಲೇ ಎಲ್ಲವೂ ನಿರ್ಧಾರವಾಗುತ್ತದೆ ಎಂದರು.

 

 

Leave a Reply

Your email address will not be published. Required fields are marked *