ನವದೆಹಲಿ: ದೆಹಲಿ ಪೊಲೀಸ್ ವಿಭಾಗದ ಮುಖ್ಯ ಪೇದೆಯೊಬ್ಬರು ಕರ್ತವ್ಯನಿರತರಾಗಿದ್ದಾಗಲೇ, ಪೊಲೀಸ್ ವಾಹನದಲ್ಲೇ ಗುಂಡುಹಾರಿಸಿಕೊಂಡು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದ ಇಮ್ರಾನ್ ಮೊಹಮ್ಮದ್ ಚಂದಗಿ ರಾಮ್ ಅಖಾರ ಪ್ರದೇಶದಲ್ಲಿ ರೌಂಡ್ಸ್‌ನಲ್ಲಿದ್ದರು.
ಪೊಲೀಸ್ ಜೀಪ್‌ನಿಂದ ಡ್ರೈವರ್ ಹಾಗೂ ಸಹೋದ್ಯೋಗಿ ಕಳಗಿಳಿಯುತ್ತಿದ್ದಂತೆಯೇ, ಪೊಲೀಸ್ ರಿವಲ್ವಾರ್‌ನಿಂದಲೇ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಇಮ್ರಾನ್ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಕುರಿತಂತೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.