ಚನ್ನಗಿರಿ: ತಾಲೂಕಿನ ಸೋಮಲಾಪುರ, ಜಕ್ಕಲ್ಲಿ, ಸೂಳೆಕೆರೆ, ಸೇರಿದಂತೆ ಸುತ್ತಮುತ್ತಲಿನ ಹೊಲ, ಗದ್ದೆಗಳಲ್ಲಿ ಕಾಡಾನೆಯೊಂದು ಪುಂಡಾಟ ನಡೆಸಿದ್ದು, ಸೋಮಲಾಪುರ ಗ್ರಾಮದ ಹೊಲದಲ್ಲಿ ಅವರೆಕಾಯಿ ಬೀಡಿಸುತ್ತಿದ್ದ ಯುವತಿ ಮೇಲೆ ದಾಳಿ ನಡೆಸಿದ್ದು ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕವನ (18) ಕಾಡಾನೆ ತುಳಿತಕ್ಕೆ ಬಲಿಯಾದ ಯುವತಿ. ಹೊಸದುರ್ಗ ಕಡೆಯಿಂದ ಜೋಳದಾಳ ಕಾಡಂಚಿನಿಂದ ಬಂದಿದ್ದು, ಕಾಡಾನೆ ಸೋಮಲಾಪುರ ಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಹೊಲಗದ್ದೆಗಳಲ್ಲಿ ಕೆಲಸ ಕಾರ್ಯ ದಲ್ಲಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.