Spread the love

ದುಬೈ: 12 ಭಾರತೀಯರು ಸೇರಿದಂತೆ 17 ಜನರ ಸಾವಿಗೆ ಕಾರಣವಾದ 2019 ರ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಭಾರತೀಯ ವ್ಯಕ್ತಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ಬೇಗ್ ಮಿರ್ಜಾ ಅವರು ಒಮಾನ್‌ ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಗಿತ್ತು, 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು, ಅವರಲ್ಲಿ 12 ಮಂದಿ ಭಾರತೀಯರು ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇಲ್ಲಿನ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ ನ ಪ್ರವೇಶ ಕೇಂದ್ರದ ಬಳಿ ಬಸ್ ಚಾಲಕ ಓವರ್‌ ಹೆಡ್ ಹೈಟ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿತ್ತು. ಬಸ್‌ ನ ಮೇಲಿನ ಎಡ ಭಾಗಕ್ಕೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ. ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ದಿರ್ಹಮ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ.

ಮುಹಮ್ಮದ್ ಬೇಗ್ ಮಿರ್ಜಾ ಅವರ ವಕೀಲರ ಪ್ರಕಾರ, ಯುಎಇ ವಿಮಾ ಪ್ರಾಧಿಕಾರ ಪ್ರಾಥಮಿಕ ರಾಜಿ ನ್ಯಾಯಾಲಯವು ಆರಂಭದಲ್ಲಿ ಅವರಿಗೆ ಪರಿಹಾರವಾಗಿ 1 ಮಿಲಿಯನ್ ದಿರ್ಹಂ ನೀಡಿತು. ನಂತರ ಅರ್ಜಿದಾರರು ದುಬೈ ಫಸ್ಟ್ ಇನ್‌ಸ್ಟಾನ್ಸ್ ನ್ಯಾಯಾಲಯವನ್ನು ಮೇಲ್ಮನವಿ ಸಲ್ಲಿಸಿದಾಗ ಪರಿಹಾರದ ಅಂಕಿಅಂಶವನ್ನು 5 ಮಿಲಿಯನ್ ದಿರ್ಹಮ್‌ ಗೆ ಏರಿಸುವಂತೆ ತೀರ್ಪು ನೀಡಿತು.

 

 

Leave a Reply

Your email address will not be published. Required fields are marked *