Spread the love

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ವೈನ್ ಶಾಪ್‌ನಲ್ಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಬುಧವಾರ ಬೆಳಿಗ್ಗೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ತಪ್ಪಿಸಿಕೊಂಡ ಭಯೋತ್ಪಾದಕರನ್ನು ಮರೂಫ್ ನಜೀರ್ ಸೋಲೆಹ್ ಮತ್ತು ಶಾಹಿದ್ ಶೋಕತ್ ಬಾಲಾ ಎಂದು ಗುರುತಿಸಲಾಗಿದ್ದು, ಇವರು ಕಳೆದ ಮೇ 2022 ರಿಂದ ಪೊಲೀಸ್ ಕಸ್ಟಡಿಯಲ್ಲಿದ್ದರು ಎನ್ನಲಾಗಿದ್ದು ಇವರಿಬ್ಬರು ಲಷ್ಕರ್-ಎ -ತೊಯ್ಬಾ ಉಗ್ರ ಸಂಘಟನೆಗೆ ಸೇರಿದವರು.

ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಲು ಬಾರಾಮುಲ್ಲಾ ಮತ್ತು ಉತ್ತರ ಕಾಶ್ಮೀರದ ಇತರ ಭಾಗಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇಬ್ಬರೂ ಭಯೋತ್ಪಾದಕರು ಕಳೆದ ವರ್ಷ ಬಾರಾಮುಲ್ಲಾದ ವೈನ್ ಶಾಪ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *