Spread the love

ನವದೆಹಲಿ: ತೆರಿಗೆದಾರರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ನೀಡುವ ಸಲುವಾಗಿ, ಪ್ಯಾನ್ ಸಂಖ್ಯೆ ಮತ್ತು ಆಧಾರ್ ನ್ನು ಲಿಂಕ್ ಮಾಡುವ ದಿನಾಂಕವನ್ನು 2023ರ ಜೂನ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ, ಆ ಮೂಲಕ ವ್ಯಕ್ತಿಗಳು ಯಾವುದೇ ಪರಿಣಾಮಗಳನ್ನು ಎದುರಿಸದೆ ತಮ್ಮ ಆಧಾರ್ ಅನ್ನು ಪ್ಯಾನ್-ಆಧಾರ್ ಲಿಂಕ್ ಮಾಡಲು ನಿಗದಿತ ಪ್ರಾಧಿಕಾರಕ್ಕೆ ತಿಳಿಸಬಹುದು.

2023ರ ಜುಲೈ 1 ರಿಂದ, ಲಿಂಕ್ ಮಾಡದ ಪಾನ್ ಸಂಖ್ಯೆಗೆ  ಪರಿಣಾಮ ಎದುರಿಸಬೇಕಾಗಿದ್ದು ಅವು ನಿಷ್ಕ್ರಿಯಗೊಳ್ಳುತ್ತವೆ.  ಒಂದು ಸಾವಿರ ರೂಪಾಯಿ ಶುಲ್ಕವನ್ನು ಪಾವತಿಸಿದ ನಂತರ ನಿಗದಿತ ಪ್ರಾಧಿಕಾರಕ್ಕೆ ಆಧಾರ್  ಗೆ ಮಾಹಿತಿ ನೀಡಿದಾಗ, 30 ದಿನಗಳಲ್ಲಿ ಪ್ಯಾನ್ ನ್ನು ಮತ್ತೆ ಕಾರ್ಯಗತಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ಹಿಂದಿನ ಗಡುವು ಮಾರ್ಚ್ 31 ರಂದು ಕೊನೆಗೊಳ್ಳುತ್ತಿತ್ತು. ಆಧಾರ್-ಪ್ಯಾನ್ ಲಿಂಕ್ ಮಾಡಲು ವ್ಯಕ್ತಿಗಳು ತಮ್ಮ ಆಧಾರ್ ನ್ನು ಯಾವುದೇ ಪರಿಣಾಮಗಳನ್ನು ಎದುರಿಸದೆ ನಿಗದಿತ ಪ್ರಾಧಿಕಾರಕ್ಕೆ ತಿಳಿಸಬಹುದು ಎಂದು ಅದು ಹೇಳಿದೆ. ಜುಲೈ 1, 2023 ರಿಂದ, ಅಗತ್ಯವಿರುವಂತೆ ತಮ್ಮ ಆಧಾರ್ ನ್ನು ತಿಳಿಸಲು ವಿಫಲರಾದ ತೆರಿಗೆದಾರರ PAN ನಿಷ್ಕ್ರಿಯಗೊಳ್ಳುತ್ತದೆ. ಇಲ್ಲಿಯವರೆಗೆ 51 ಕೋಟಿಗೂ ಹೆಚ್ಚು ಪ್ಯಾನ್‌ಗಳನ್ನು ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ.

Leave a Reply

Your email address will not be published. Required fields are marked *